ಜಮಖಂಡಿ 2028ರ ವಿಧಾನಸಭೆ ಚುನಾವಣೆ: ಈಗಲೇ ರಾಜಕೀಯ ಕಸರತ್ತು ಜೋರು – ಬಿಜೆಪಿ ಟಿಕೆಟ್ ಸುತ್ತ ತೀವ್ರ ಚರ್ಚೆ, ಹೊಸ ಲೆಕ್ಕಾಚಾರ ಆರಂಭ?
ಅಪ್ಪು ಪೋತರಾಜ
ಜಮಖಂಡಿ: 2028ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಬಾಕಿ ಇದ್ದರೂ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಈಗಾಗಲೇ ವೇಗ ಪಡೆದುಕೊಂಡಿವೆ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳಷ್ಟೇ ಅಲ್ಲದೆ ವಿವಿಧ ಸಮುದಾಯಗಳ ಪ್ರಭಾವಿ ನಾಯಕರು ಕೂಡ ತಮ್ಮ ರಾಜಕೀಯ ಭವಿಷ್ಯದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ವಿಶೇಷವಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಪಕ್ಷದ ಹಾಲಿ ಶಾಸಕ ನಾಡೋಜ ಜಗದೀಶ್ ಗುಡಗುಂಟಿ ಅವರಿಗೆ ಮತ್ತೆ ಅವಕಾಶ ಸಿಗುತ್ತದೆಯೇ ಅಥವಾ ಹೊಸ ಮುಖಕ್ಕೆ ಆದ್ಯತೆ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
ಕ್ಷೇತ್ರದಲ್ಲಿ ಹಾಲಿ ಶಾಸಕ ಜಗದೀಶ್ ಗುಡಗುಂಟಿ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ. ವಿವಿಧ ಸಮುದಾಯಗಳ ಕೆಲ ನಾಯಕರು ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಪರ್ಯಾಯ ನಾಯಕತ್ವದ ಕುರಿತು ಕಾರ್ಯಕರ್ತರೊಂದಿಗೆ ಸದ್ದಿಲ್ಲದೆ ಸಂಪರ್ಕ ಸಾಧಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಟಿಕೆಟ್ ಆಕಾಂಕ್ಷಿಗಳು ಕಾರ್ಯಕರ್ತರ ಸಭೆಗಳು, ಸಮುದಾಯ ಮುಖಂಡರ ಸಂಪರ್ಕ ಹಾಗೂ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ವೇಗ ನೀಡಿದ್ದು, 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ಗೆ ಬಂಡಾಯದ ಬಿಸಿ ತಟ್ಟಲಿದೆ ರಾಜಕೀಯ ವಲಯದಲ್ಲಿ ಈ ಸದ್ಯ ಚರ್ಚೆ ಇರುವ ಮಾಹಿತಿ ಪ್ರಕಾರ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮತಗಳನ್ನು ಒಗ್ಗೂಡಿಸುವುದು ಅಥವಾ ವಿಭಜಿಸುವುದು ಎಂಬ ಎರಡು ವಿಭಿನ್ನ ರಾಜಕೀಯ ತಂತ್ರಗಳ ಬಗ್ಗೆ ಕೆಲ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಬಿಜೆಪಿ,ಅಭ್ಯರ್ಥಿ ಮೇಲೆ ನಿರ್ಣಯವಾಗಿದೆ ಹೊಸ ಅಭ್ಯರ್ಥಿ ಕಣಕ್ಕೆ ಇಳಿದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತಗಳ ಮೇಲೆ ನೇರ ಪರಿಣಾಮ ಬೀರಬಹುದು.
ಬಿಜೆಪಿಯ ಬಲಿಷ್ಠ ಟಿಕೆಟ್ ಆಕಾಂಕ್ಷೆಯು ಹಣ ಮತ್ತು ಸಮುದಾಯದ ಬಲದಿಂದ ಕಾಂಗ್ರೆಸ್ ಮತ ವಿಭಜನೆ ಮಾಡಲು ಕ್ಷೇತ್ರದ ಹಿರಿಯ ಹಾಗೂ ಪ್ರಭಾವಿ ಅಲ್ಪಸಂಖ್ಯಾತ ಸಮುದಾಯದ ನಾಯಕರೊಬ್ಬರನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸುವ ಸಾಧ್ಯತೆಗಳಿವೆ ಈಗಾಗಲೇ ಈ ಕುರಿತು ಎರಡು ಗೌಪ್ಯವಾಗಿ ಸಭೆ ನಡೆಸಲಾಗಿದೆ ಎಂದ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಅಭ್ಯರ್ಥಿ ಆಯ್ಕೆಯೇ ಮುಂದಿನ ಚುನಾವಣೆಯ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಹೀಗಾಗಿ ಪ್ರಮುಖ ಪಕ್ಷಗಳು ಸ್ಥಳೀಯ ಜನಾಭಿಪ್ರಾಯ, ಸಂಘಟನಾ ಬಲ ಮತ್ತು ಗೆಲುವಿನ ಸಾಧ್ಯತೆಗಳನ್ನು ಆಧರಿಸಿರುತ್ತದೆ. ಮತ್ತು ಅಭ್ಯರ್ಥಿ ಆಯ್ಕೆ ಚುನಾವಣಾ ಪೂರ್ವ ಬೆಳವಣಿಗೆಗಳೇ ಜಮಖಂಡಿ ಕ್ಷೇತ್ರದ ರಾಜಕೀಯ ದಿಕ್ಕನ್ನು ನಿರ್ಧರಿಸಲಿವೆ.
ಈ ಎಲ್ಲ ಬೆಳವಣಿಗೆ 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಹಾಲಿ ಶಾಸಕ ಜಗದೀಶ್ ಗುಡಗುಂಟಿ ಅವರು ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ,