Loading...

ವಿಜಯಪುರದಿಂದ ತಿರುಪತಿಗೆ ವಿಶೇಷ ರೈಲು : ತಿಮ್ಮಪ್ಪನ ದರ್ಶನ ಈಗ ಸಲೀಸು

Suddi Mitra Editor

August 04, 2026 • 10:40 AM

ವಿಜಯಪುರದಿಂದ ತಿರುಪತಿಗೆ ವಿಶೇಷ ರೈಲು : ತಿಮ್ಮಪ್ಪನ ದರ್ಶನ ಈಗ ಸಲೀಸು

ವಿಜಯಪುರ : ಕಷ್ಟಗಳನ್ನು ಬಗೆ ಹರಿಸಿ ಇಷ್ಟಾರ್ಥಗಳನ್ನು ನೇರವೇರಿಸುವ ತಿರುಪತಿಯ ತಿಮ್ಮಪ್ಪನ ದರ್ಶಕ್ಕೆ ಕೋಟ್ಯಂತರ ಭಕ್ತ ಸಾಗರವೇ ಹರಿದು ಹೋಗುತ್ತದೆ, ವಿಜಯಪುರದಲ್ಲಿಯೂ ತಿರುಪತಿ ತಿಮ್ಮಪ್ಪನ ಭಕ್ತರು ಅಪಾರ. ಆದರೆ ಸೂಕ್ತವಾದ ರೈಲು ಸೌಲಭ್ಯ ಪ್ರಯಾಣಿಕರಿಗೆ ಪ್ರಯಾಸಪಡುವಂತೆ ಮಾಡುತ್ತಿತ್ತು. ಈಗ ತಿರುಪತಿಗೆ ವಿಶೇಷ ರೈಲು ಸಂಪರ್ಕ ಕಲ್ಪಿಸುವ ಕಾರ್ಯ ಸಕಾರಾತ್ಮಕ ಸ್ಪಂದನೆ ದೊರಕಿದೆ.

ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಿಶೇಷ ಮುತವರ್ಜಿ ವಹಿಸಿ ವಿಶೇಷ ರೈಲು ಸಂಚಾರವನ್ನು ಆರಂಭಿಸಲು ಯಶಸ್ವಿಯಾಗಿದ್ದು, ಸೊಲ್ಲಾಪೂರ-ಅನಕಪಲ್ಲಿ ರೈಲನ್ನು ವಿಜಯಪುರ ಮಾರ್ಗವಾಗಿ ತಿರುಪತಿಗೆ ಸಂಚಾರ ಬೆಳೆಸುವ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಆ ಮೂಲಕ ವಿಜಯಪುರದಿಂದ ತಿರುಪತಿಗೆ ಹೋಗುವ ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗಲಿದ್ದು, ಅನೇಕ ವರ್ಷಗಳ ಬೇಡಿಕೆ ಈಡೇರಿಕೆಯಾದಂತಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹರ್ಷ ವ್ಯಕ್ತಪಡಿಸಿದ್ದಾರೆ. 

ವಿಜಯಪುರದಿಂದ ಸುಕ್ಷೇತ್ರ ತಿರುಪತಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಣ ಬೆಳೆಸುತ್ತಾರೆ, ವಿಜಯಪುರದಿಂದಲೇ ನೇರವಾಗಿ ರೈಲು ಸಂಪರ್ಕ ಇರಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಶೇಷ ಕಾಳಜಿ ಹಾಗೂ ಮುತವರ್ಜಿ ವಹಿಸಿ ಈ ಕಾರ್ಯಕ್ಕೆ ಪ್ರಯತ್ನಿಸುತ್ತಿದ್ದೆ, ಅದರ ಭಾಗವಾಗಿ ಈಗ ತಿರುಪತಿಗೆ ನೇರವಾಗಿ ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಅನುಕೂಲವಾಗಲು ಸೊಲ್ಲಾಪೂರ-ಅನಕಪಲ್ಲಿ ರೈಲನ್ನು ತಿರುಪತಿಗೆ ಹೆಚ್ಚುವರಿಯಾಗಿ ಪ್ರಯಾಣ ಬೆಳೆಸುವ ಅನುಕೂಲ ಕಲ್ಪಿಸಲಾಗಿದೆ, ಆ ಮೂಲಕ ಈ ರೈಲು ಸೊಲ್ಲಾಪೂರ-ವಿಜಯಪುರ-ಗದಗ, ಹೋಸಪೇಟೆ ಮಾರ್ಗವಾಗಿ ತಿರುಪತಿಗೆ ತಲುಪಲಿದೆ. ಇದರಿಂದ ಉಳಿದ ಜಿಲ್ಲೆಗಳ ಪ್ರಯಾಣಿಕರಿಗೂ ಅತ್ಯಂತ ಅನುಕೂಲವಾಗಿದೆ, ಒಟ್ಟಾರೆಯಾಗಿ ಭಕ್ತರ ಬೇಡಿಕೆ ಈಡೇರಿದಂತಾಗಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.

- Advertisement -