Loading...

ವ್ಯಕ್ತಿಪೂಜೆಗೆ ಕಾಂಗ್ರೆಸ್‌ನಲ್ಲಿ ಅವಕಾಶವಿಲ್ಲ: ಡಿಕೆ ಘೋಷಣೆಗೆ ಖರ್ಗೆ ಆಕ್ರೋಶ; ಕಾರ್ಯಕರ್ತರಿಗೆ "ಯೂಸ್‌ಲೆಸ್ ಫೆಲೋಸ್" ಎಂದ ಎಐಸಿಸಿ ಅಧ್ಯಕ್ಷ

Suddi Mitra Editor

June 21, 2026 • 11:39 AM

ವ್ಯಕ್ತಿಪೂಜೆಗೆ ಕಾಂಗ್ರೆಸ್‌ನಲ್ಲಿ ಅವಕಾಶವಿಲ್ಲ: ಡಿಕೆ ಘೋಷಣೆಗೆ ಖರ್ಗೆ ಆಕ್ರೋಶ; ಕಾರ್ಯಕರ್ತರಿಗೆ "ಯೂಸ್‌ಲೆಸ್ ಫೆಲೋಸ್" ಎಂದ ಎಐಸಿಸಿ ಅಧ್ಯಕ್ಷ

ಬೆಂಗಳೂರು, ಜೂನ್ 21: ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ ಹರಿಪ್ರಸಾದ ಅವರ ಪದಗ್ರಹಣ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸಮಾರಂಭವನ್ನು ಉದ್ದೇಶಿಸಿ ಖರ್ಗೆ ಮಾತನಾಡುತ್ತಿದ್ದ ವೇಳೆ, ಕೆಲ ಕಾರ್ಯಕರ್ತರು "ಡಿಕೆ... ಡಿಕೆ... ಡಿಕೆ..." ಎಂದು ಘೋಷಣೆ ಕೂಗಲಾರಂಭಿಸಿದರು. ಇದರಿಂದ ಅಸಮಾಧಾನಗೊಂಡ ಖರ್ಗೆ, ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.

"ಹೇ, ಸುಮ್ಮನೆ ಇಲ್ಲಿ ಕೂಗಿದರೆ ದೇಶ ನಿಮ್ಮ ಕೈಗೆ ಬಂದಂತೆ ಆಗುತ್ತಾ? 

ನಾವು ಇಲ್ಲಿ ಕಸಗುಡಿಸೋಕೆ ಬಂದಿದ್ದೇವಾ? ಯೂಸ್‌ಲೆಸ್ ಫೆಲೋಸ್" ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯ ಮೇಲಿದ್ದ ನಾಯಕರು ಮಾತನಾಡಲು ಅವಕಾಶ ನೀಡದೇ ಘೋಷಣೆಗಳನ್ನು ಮುಂದುವರಿಸಿದ ಕಾರ್ಯಕರ್ತರನ್ನು ಅವರು ತರಾಟೆಗೆ ತೆಗೆದುಕೊಂಡ" ಖರ್ಗೆ 

"ವ್ಯಕ್ತಿ ಪೂಜೆ ನಡೆಯಲ್ಲ: 

ಈ ವೇಳೆ ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದ ಖರ್ಗೆ, ಕಾಂಗ್ರೆಸ್‌ನಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.ಪಕ್ಷಕ್ಕೆ ಶಿಸ್ತು ಬೇಕು. ಯಾರು ಎಷ್ಟೇ ದೊಡ್ಡವರಿರಲಿ, ಇಲ್ಲಿ ವ್ಯಕ್ತಿ ಪೂಜೆ ನಡೆಯಲ್ಲ. ನನ್ನ 58 ವರ್ಷದ ರಾಜಕೀಯ ಜೀವನದಲ್ಲಿ ಹಲವು ನಾಯಕರು ಬಂದು ಹೋಗಿದ್ದಾರೆ. ಸಾಕಷ್ಟು ಮಂದಿ ನೋಡಿದ್ದೇನೆ. ಅನೇಕ ನಾಯಕರು ಕಾಂಗ್ರೆಸ್‌ನಿಂದ ಬೆಳೆದಿದ್ದಾರೆ. ಪಕ್ಷಕ್ಕೆ ಕೊಡುಗೆ ಹೆಚ್ಚು ಇರದಿದ್ದರೂ, ಹಲವರಿಗೆ ಕಾಂಗ್ರೆಸ್‌ ಹೆಚ್ಚಿನ ಶಕ್ತಿ ಕೊಟ್ಟಿದೆ. ನಾವೆಲ್ಲರೂ ಕೂಡಿ ಪಕ್ಷವನ್ನು ಕಟ್ಟೋಣ. ಮಧ್ಯದಲ್ಲಿ ಕೂಗಾಡಿದರೆ ಪುಟೇಜ್ ಬಳಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ವೇದಿಕೆ ಮೇಲೆ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ನಿಕಟಪೂರ್ವ ಸಿಎಂ ಸಿದ್ದರಾಮಯ್ಯ,ಮಾಜಿ ಸಿಎಂ ವೀರಪ್ಪ ಮೊಯ್ಲಿ, ಹರ್ಯಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾವ್ ನರೇಂದ್ರ ಸಿಂಗ್, ಸಚಿವರಾದ ಕೆ ಎಚ್ ಮುನಿಯಪ್ಪ, ಕೆ ಜೆ ಜಾರ್ಜ್, ಎಚ್ ಕೆ ಪಾಟೀಲ್, ರಾಮಲಿಂಗಾರೆಡ್ಡಿ, ಎಂ ಬಿ ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.

- Advertisement -