Loading...

ಸಿದ್ದರಾಮಯ್ಯ ಪದತ್ಯಾಗಕ್ಕೂ ಮುನ್ನವೇ ಕುರುಬ ಸಮುದಾಯಕ್ಕೆ & ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೆ ಬಿಗ್ ಗಿಫ್ಟ್ ! ಒಂದೇ ಸಮುದಾಯಕ್ಕೆ ಸೀಮಿತವಾಯ್ತಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ?

Suddi Mitra Editor

June 11, 2026 • 08:54 AM

ಸಿದ್ದರಾಮಯ್ಯ ಪದತ್ಯಾಗಕ್ಕೂ ಮುನ್ನವೇ ಕುರುಬ ಸಮುದಾಯಕ್ಕೆ & ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೆ ಬಿಗ್ ಗಿಫ್ಟ್ ! ಒಂದೇ ಸಮುದಾಯಕ್ಕೆ ಸೀಮಿತವಾಯ್ತಾ ಹಿಂದುಳಿದ ವರ್ಗಗಳ  ಕಲ್ಯಾಣ ಇಲಾಖೆ ?

ಬೆಂಗಳೂರು: ಸಿದ್ದರಾಮಯ್ಯ ಅವರು ಪದತ್ಯಾಗಕ್ಕೂ ಮುನ್ನವೇ ಕುರುಬ ಸಮುದಾಯಕ್ಕೆ ಮತ್ತು ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೆ ಬಿಗ್ ಗಿಫ್ಟ್ ನೀಡಿದ್ದಾರೆ. 

ಅಧಿಕಾರ ಬಿಟ್ಟು ಕೊಡುವ ತರಾತುರಿಯಲ್ಲೇ ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬ ವಿಚಾರ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಒಂದೇ ಸಮುದಾಯಕ್ಕೆ ಸೀಮಿತವಾಯ್ತಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎಂಬ ಪ್ರಶ್ನೆ ಮೂಡಿದೆ?

ಗದಗದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೂ 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸೇರಿದಂತೆ ಒಟ್ಟು 71.85 ಕೋಟಿ ಅನುದಾನ ಮಂಜೂರುರಾದ ಅನುದಾನದ ಪೈಕಿ‌ ಕುರುಬ ಸಮುದಾಯದ 89 ಸಂಸ್ಥೆಗಳಾಗಿವೆ.ಇದ್ರಿಂದ ಹಿಂದುಳಿದ ವರ್ಗಗಳಲ್ಲಿ ಬೇರೆ ಸಮುದಾಯಗಳು ಇಲ್ವಾ ಎಂಬ ಪ್ರಶ್ನೆ..? ಹುಟ್ಟಾಕ್ಕಿದೆ.

ನೂತನ ಸಿಎಂ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರದ ಒಂದು ದಿನ ಮೊದಲೇ ಆರ್ಥಿಕ ಇಲಾಖೆ ಪ್ರಸ್ತಾವನೆ 155 ವಿವಿಧ ಸಂಸ್ಥೆಗಳಿಗೆ 71.85 ಕೋಟಿ ಅನುದಾನ ಮಂಜೂರು ಮಾಡಿದೆ. ಸಮುದಾಯ ಭವನ ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟ ಬಜೆಟ್ ನ 52% ಅನುದಾನ ಕೆಲವೇ ಸಮುದಾಯದ ಸಂಸ್ಥೆಗಳಿಗೆ ಮಂಜೂರಾಗಿದೆ.

ಸಮುದಾಯ ಭವನಕ್ಕೆ 136 ಕೋಟಿ ಮೀಸಲು

2026-27 ಸಾಲಿನ ಬಜೆಟ್ ನಲ್ಲಿ ವಿವಿಧ ಸಮುದಾಯಗಳ ಸಮುದಾಯ ಭವನಕ್ಕೆ 136 ಕೋಟಿ ಮೀಸಲಿಟ್ಟಿದ್ದ ಸರ್ಕಾರ ಈ ಪೈಕಿ 52% ಅನುದಾನ 3-4 ಸಮುದಾಯಗಳಿಗೆ ಮಾತ್ರ ಮಂಜೂರು ಮಾಡಿದೆ. ಮಡಿವಾಳ‌ ಸಮುದಾಯ ಸಂಘಗಳು - 08, ಯಾದವ ಸಮುದಾಯ ಸಂಘಗಳು - 02, ಹೆಳವ ಸಮುದಾಯಗಳ ಸಂಘಗಳು‌- 01, ಸವಿತಾ ಸಮಾಜದ ಸಂಘಗಳು- 01, ಟೀ ನರಸೀಪುರ ಒಂದೇ ತಾಲೂಕಿಗೆ 13 ಸಮುದಾಯ ಭವನಗಳು ಮಂಜೂರು ಮಾಡಲಾಗಿದೆ. ಜೊತೆ ಕುರುಬ ಸಮುದಾಯದ 89 ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ

ತರಾತುರಿಯಲ್ಲಿ ಅನುದಾನ ಮಂಜೂರು ಮಾಡಿದ್ದೇಕೆ?

ಹಿಂದುಳಿದ ವರ್ಗಗಳ ಸಮುದಾಯಗಳ ಪಟ್ಟಿ ಸಾವಿರಕ್ಕೂ ಹೆಚ್ಚು ಜಾತಿಗಳು ಇವೆ. ಪ್ರವರ್ಗ 1ರಲ್ಲಿಯೇ - 147 ಜಾತಿಗಳಿದ್ದು, ಇವೆಲ್ಲವನ್ನೂ ಕಡೆಗಣಿಸಿ ತರಾತುರಿಯಲ್ಲಿ ಅನುದಾನ ಮಂಜೂರು ಮಾಡಿದ್ದೇಕೆ? ಎಂಬ ಅನುಮಾನ ಇದೀಗ ಮೂಡಿದೆ. ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮುದಾಯಕ್ಕೇ ಮಾತ್ರ ಅನುದಾನದ ಕೊಡುಗೆ ನೀಡಿದ್ದು, ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವ ವೇಳೆ ತರಾತುರಿಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -