Loading...

ಮಧ್ಯ ರಾತ್ರಿ 12 ಗಂಟೆಗೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಯು ಟಿ ಖಾದರ್ : ಅವ್ಯವಸ್ಥೆ ಕಂಡು ಗರಂ

Suddi Mitra Editor

June 05, 2026 • 02:34 AM

ಮಧ್ಯ ರಾತ್ರಿ 12 ಗಂಟೆಗೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಯು ಟಿ ಖಾದರ್ : ಅವ್ಯವಸ್ಥೆ ಕಂಡು  ಗರಂ

ಬೆಂಗಳೂರು: ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು ಟಿ ಖಾದರ್ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಭೇಟಿ ನೀಡಿದ ಯುಟಿ ಖಾದರ್ ಅವರು, ಆಸ್ಪತ್ರೆ ಸಿಬ್ಬಂದಿ ಬಗ್ಗೆ ಪರಿಶೀಲನೆ, ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ವಿಧಾನ, ತುರ್ತು ಚಿಕಿತ್ಸಾ ಘಟಕದಲ್ಲಿ ಪರಿಶೀಲನೆ ನಡೆಸಿದ್ದಾರೆ.

ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

ಸಚಿವ ಖಾದರ್ ಭೇಟಿ ವೇಳೆ ಗರ್ಭಿಣಿ ನೆಲದ ಮೇಲೆ ಕುಳಿತಿರುವುದನ್ನ ಕಂಡು ಖಾದರ್ ಗರಂ ಆಗಿದ್ದಾರೆ. ಮೇಲೆ ಕೂರಿಸಿ ಎಂದು ವೈದ್ಯರು ಹಾಗೂ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ್ರು. ಹೆರಿಗೆ ಕೊಠಡಿ, ಸಿಸೇರಿಯನ್ ವಾರ್ಡ್ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಿದ ಖಾದರ್ ಅವ್ರು ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸಿಬ್ಬಂದಿಗಳಿಗೆ ಚಾಟಿ ಬೀಸಿದ ಖಾದರ್

 ಹಾಜರಾತಿಯಲ್ಲಿ ಗೈರಾಗಿರುವ ಸಿಬ್ಬಂದಿಗಳಿಗೆ ಖಾದರ್ ಚಾಟಿ ಬೀಸಿದ್ದಾರೆ. ಅಲ್ಲದೇ ರೋಗಿಗಳ ಬಳಿಯೂ ತೆರಳಿ ಸಚಿವ ಖಾದರ್ ಮಾಹಿತಿ ಪಡೆದಿದ್ದಾರೆ. ಇಬ್ಬರು ವೈದ್ಯರು ಗೈರಾಗಿದ್ರೂ ಅವರಿಗೆ ನಾಳೆ ಎಚ್ಚರಿಕೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚಿಸ್ತೇನೆ ಎಂದಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಂಬ್ಯುಲೆನ್ಸ್ ಗಳ ಹಾವಳಿ ಹೆಚ್ಚಿದ್ದು, ಇಂದು ಅರೋಗ್ಯ ಸೌಧದಲ್ಲಿ ಇಲಾಖೆಯ ಪರಿಶೀಲನಾ ಸಭೆಯಿದ್ದು, ಅಲ್ಲಿ ವಿಚಾರಣೆ ಮಾಡುತ್ತೇನೆ. ಯಾವುದೇ ಸಲಹೆಗಳು ಇದ್ರೂ ಅದರ ಬಗ್ಗೆ ಚರ್ಚಿಸುತ್ತೇವೆ. ವೈದ್ಯರಿಗೂ ಕೆಲಸ ಮಾಡಲು ನಿರ್ಭಯವಾದ ವಾತಾವರಣ ಸೃಷ್ಠಿಯಾಗಬೇಕು ಎಂದಿದ್ದಾರೆ.

- Advertisement -