ಜಮೀರ್‌ಗೆ ಸಚಿವ ಸ್ಥಾನ ಕೈ ತಪ್ಪವು ಸಂಕಷ್ಟ! ಜಮೀರ ಭವಿಷ್ಯ ಹೈಕಮಾಂಡ ಅಂಗಳದಲ್ಲಿ! ರಿಜ್ವಾನ್ಅರ್ಷದ್, ಎನ್.ಎ.ಹ್ಯಾರಿಸ್ ತನ್ವೀರ ಶೇಠ ಫುಲ್ ಖುಷ್! ಇಕ್ಬಾಲ್ ಹುಸೇನ್ ಅನಾರೋಗ್ಯ ಸಮಸ್ಯೆ!
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಸಂಪುಟಕ್ಕೆ ಅಲ್ಪಸಂಖ್ಯಾತ ಶಾಸಕರು ಎರಡನೇ ಹಂತದ ಸಚಿವ ಸಂಪುಟದಲ್ಲಿ ಸೇರಲು ಪೈಪೋಟಿ ನಡೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಗಳು ಜೋರಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಕೋಟಾದಲ್ಲಿ ಸಚಿವ ಸ್ಥಾನ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ನಡುವೆ, ಮಾಜಿ. ಸಚಿವರಾದ ಜಮೀರ ಅಹ್ಮದ್ ಖಾನ್ ಅವರಿಗೆ ಹೆಚ್ಚುವರಿ ಪ್ರಾಮುಖ್ಯತೆ ಸಿಗುತ್ತದೆಯೇ ಅಥವಾ ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದಾವಣಗೆರೆ ಉಪಚುನಾವಣೆಯ ಪರಿಣಾಮ ಇನ್ನೂ ಕಾಂಗ್ರೆಸ್ ನಾಯಕತ್ವದ ಲೆಕ್ಕಾಚಾರದಲ್ಲಿ ಪ್ರಮುಖ ಅಂಶವಾಗಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳ ಕುಸಿತ ಹಾಗೂ ಪಕ್ಷದ ಒಳಗಿನ ಅಸಮಾಧಾನಕ್ಕೆ ಜಮೀರ್ ಅಹಮದ್ ಖಾನ್ ಕಾರಣರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಚುನಾವಣಾ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ದೂರುಗಳು ಹಾಗೂ ಆಡಿಯೋಗಳು ಬಹಿರಂಗವಾಗಿರುವುದು ಅವರ ವಿರುದ್ಧದ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಪಕ್ಷದ ಹಲವು ನಾಯಕರು ಜಮೀರ್ ಅವರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದು ಮತ್ತು ಕೆಲವು ವಿಚಾರಗಳಲ್ಲಿ ಪಕ್ಷದ ನಿರ್ದೇಶನಗಳನ್ನು ಕಡೆಗಣಿಸಿರುವುದು ಕೂಡ ಅವರ ವಿರುದ್ಧದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಜಮೀರ್‌ಗೆ ಸಚಿವ ಸ್ಥಾನ ಸಿಗದಿರುವ ವಿಚಾರ. ಜಮೀರ್ ಬೆಂಬಲಿಗರು ನಿರಂತರವಾಗಿ ಒತ್ತಡ ಹೇರಿದರೂ, ಸಿದ್ದರಾಮಯ್ಯ ಅವರ ಬೆಂಬಲ ಸ್ಪಷ್ಟವಾಗಿ ಕಾಣಿಸದಿರುವುದು ಜಮೀರ್ ಅವರ ಸಚಿವ ಸ್ಥಾನ ಸಾಧ್ಯತೆ ಮೇಲೆ ಪರಿಣಾಮ ಬೀರಬಹುದು ಸಿದ್ದರಾಮಯ್ಯ- ಜಮೀರ್ ನಡುವಿನ ಭಿನ್ನಾಭಿಪ್ರಾಯ ಎಷ್ಟು ಗಂಭೀರವಾಗಿದೆ ಮತ್ತು ಅದು ಸಚಿವ ಸ್ಥಾನಕ್ಕೆ ಅಡ್ಡಿಯಾಗುತ್ತದೆಯೇ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಗಳಿಂದ ಸ್ಪಷ್ಟವಾಗಲಿದೆ.
ಅಲ್ಪಸಂಖ್ಯಾತರ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಪೈಪೋಟಿ ಜೋರಾಗಿ ಜಮೀರ್‌ಗೆ ಸಚಿವ ಸ್ಥಾನ ಕೈ ತಪ್ಪವು ಸಂಕಷ್ಟವೇ ಹೆಚ್ಚಾಗಿದೆ ಈ ಸಂಪುಟ ವಿಸ್ತರಣೆ ಅಲ್ಪಸಂಖ್ಯಾತರ ನಾಯಕ ಜಮೀರ ಜಮೀರ್ ಭವಿಷ್ಯವನ್ನು ಹೈಕಮಾಂಡ, ರಾಜ್ಯ ನಾಯಕರು ನಿರ್ಧರಿಸುವರೇ? ಎಂಬುದು ಕಾದು ನೋಡಬೇಕು.
ಜಮೀರ ಅಹ್ಮದ್ ಖಾನ್ ನಡೆಗೆ ಹೈಕಮಾಂಡ ಮುನಿಸಿಕೊಂಡಿದ್ದು ಇನ್ನುಳಿದ ಅಲ್ಪಸಂಖ್ಯಾತ ಶಾಸಕರಿಗೆ ವರಧಾನವಾಗಿದೆ.ಇಕ್ಬಾಲ್ ಹುಸೇನ್ ಶಾಸಕರು ಹಳೆಯ ಕಾಂಗ್ರೆಸ್ ನಾಯಕರು, ರಿಜ್ವಾನ್ ಅರ್ಷದ್ ಯುವ ನಾಯಕತ್ವವನ್ನು ಹೊಂದಿದ್ದಾರೆ ಹ್ಯಾರಿಸ್ ಹಿರಿಯ ಶಾಸಕರಾದವರು, ತನ್ವೀರ್ ಸೇಠ್ ಈಗಾಗಲೇ ಸಚಿವರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿರುವುದು.
ಸಧ್ಯದ ಪರಿಸ್ಥಿತಿಯಲ್ಲಿ ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್ ಮತ್ತು ಇಕ್ಬಾಲ್ ಹುಸೇನ್ ಹೆಸರುಗಳು ಹೆಚ್ಚು ಬಲವಾಗಿ ಕೇಳಿಬರುತ್ತಿವೆ. ಆದರೆ ಅಲ್ಪಸಂಖ್ಯಾತ ಕೋಟಾದಲ್ಲಿ ಒಂದೇ /ಎರಡು ಸ್ಥಾನ ಲಭ್ಯವಾದರೆ ಸ್ಪರ್ಧೆ ತೀವ್ರವಾಗಲಿದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್, ಪ್ರದೇಶ ಸಮತೋಲನ, ಜಾತಿ-ಸಮುದಾಯ ಸಮೀಕರಣ ಮತ್ತು ಡಿ.ಕೆ. ಶಿವಕುಮಾರ್–ಸಿದ್ದರಾಮಯ್ಯ ಬಣಗಳ ಅಭಿಪ್ರಾಯದ ಮೇಲೆ ಅಂತಿಮ ನಿರ್ಧಾರ ಅವಲಂಬಿತವಾಗಿರುತ್ತದೆ.
ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕತ್ವದಿಂದ ಜಮೀರ್ ಅಹ್ಮದ ಗೆ ಸಚಿವ ಸ್ಥಾನ ಕೈತಪ್ಪುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹೀಗಾಗಿ ಸದ್ಯಕ್ಕೆ ಇವೆಲ್ಲವೂ ರಾಜಕೀಯ ಊಹಾಪೋಹಗಳಷ್ಟೇ ಆಗಿವೆ.ಎಂದು ಜಮೀರ ಆಪ್ತರ ಮಾತಾಗಿದೆ.
ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಕ್ಬಾಲ್ ಹುಸೇನ್ ಅವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಕ್ಬಾಲ್ ಹುಸೇನ್ ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.