Loading...

DK Shivkumar ಮೊದಲ ಕ್ಯಾಬಿನೆಟ್- ರೈತರಿಗೆ ಬಂಪರ್ ಕೊಡುಗೆ ಘೋಷಣೆ ಸಾಧ್ಯತೆ

Suddi Mitra Editor

June 03, 2026 • 08:47 AM

DK Shivkumar ಮೊದಲ ಕ್ಯಾಬಿನೆಟ್- ರೈತರಿಗೆ ಬಂಪರ್ ಕೊಡುಗೆ ಘೋಷಣೆ ಸಾಧ್ಯತೆ

ಸುದ್ದಿ ಮಿತ್ರ

ಬೆಂಗಳೂರು ಜೂ.೦3: ಮಹತ್ವದಾದ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ನೂತನ ಸಾರಥಿಯಾಗಿ ಡಿಕೆಶಿ ಎಂಟ್ರಿಯಾಗಿದೆ. ಸಿಕ್ಕಿರೋ ಸಣ್ಣ ಸಮಯದಲ್ಲೇ ಉತ್ತಮ ಆಡಳಿತ ನೀಡುವ ಗುರಿಯನ್ನ ಡಿಕೆ ಶಿವಕುಮಾರ್ ಹೊಂದಿದ್ದು, ರಾಜ್ಯದ ಜನರಿಗಾಗಿ ಮಹತ್ವ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆ ಇದೆ.

 ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಿ. ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ಬಳಿಕ ಮೊದಲ ಸಂಪುಟ ಸಭೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ತಮ್ಮ ಮೊದಲ ಸಂಪುಟದಲ್ಲೇ ಡಿಕೆ ಶಿವಕುಮಾರ್ ಅವರು 2 ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದು, ರೈತರಿಗೆ ಬಂಪರ್ ಕೊಡುಗೆ ಘೋಷಣೆ ಸಾಧ್ಯತೆ ಇದೆ.


ಕೃಷಿ ಹಾಗೂ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್ ಅವರು ಮಹತ್ವದ ನಿರ್ಧಾರ ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

- Advertisement -