Loading...

ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ಗೆ 5 ಸ್ಥಾನ, ಬಿಜೆಪಿ 2 ಸ್ಥಾನ; ಜೆಡಿಎಸ್ ಗೆ ಸೋಲು! ಯಾರೆಲ್ಲಾ ವಿಧಾನಪರಿಷತ್‌ಗೆ ಆಯ್ಕೆ ?

Suddi Mitra Editor

June 18, 2026 • 02:45 PM

ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ಗೆ 5 ಸ್ಥಾನ, ಬಿಜೆಪಿ 2 ಸ್ಥಾನ; ಜೆಡಿಎಸ್ ಗೆ ಸೋಲು! ಯಾರೆಲ್ಲಾ ವಿಧಾನಪರಿಷತ್‌ಗೆ ಆಯ್ಕೆ ?

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ವಿಧಾನಸೌಧದಲ್ಲಿ ಬೆಳಿಗ್ಗೆ 9 ರಿಂದ ಮತದಾನ ಆರಂಭವಾಯಿತು. ಸಂಜೆ ಮತ ಎಣಿಕೆ ನಡೆಯಿತು. ಸಂಖ್ಯಾಬಲ ಆಧರಿಸಿ ಕಾಂಗ್ರೆಸ್‌ 4 ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಬಾಕಿ 1 ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ಇತ್ತು. ಕೊನೆಗೆ ಕಾಂಗ್ರೆಸ್‌ನ ಅಭ್ಯರ್ಥಿ ವಿನಯ್ ಕಾರ್ತಿಕ್‌ ಗೆಲುವು ಸಾಧಿಸಿದ್ದು, ಜೆಡಿಎಸ್‌ನ ಗೋವಿಂದರಾಜು ಸೋತಿದ್ದಾರೆ.

ಫಲಿತಾಂಶ ಪ್ರಕಟವಾಗಿದ ನಂತರ. ಕಾಂಗ್ರೆಸ್‌ 5 ಸ್ಥಾನ, ಬಿಜೆಪಿ 2 ಸ್ಥಾನ ಗಳಿಸಿಕೊಂಡಿದೆ. ಜೆಡಿಎಸ್‌ ಅಭ್ಯರ್ಥಿಗೆ ಸೋಲಾಗಿದೆ.

ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 5 ಹಾಗೂ ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿವೆ. ಜೆಡಿಎಸ್‌ ಅಭ್ಯರ್ಥಿ ಸೋಲನುಭವಿಸಿದ್ದಾರೆ. ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‌ ನಿರೀಕ್ಷೆಗಿಂತ ಒಂದು ಹೆಚ್ಚುವರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. 

ಕಾಂಗ್ರೆಸ್‌ನಿಂದ ಬಿ ಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂರ್, ಪಿ ವಿ ಮೋಹನ್, ವಿನಯ್ ಕಾರ್ತಿಕ್‌, ಶಿವಣ್ಣ ಮಳವಳ್ಳಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ವಿಜಯಶಾಲಿಗಳಿದ್ದಾರೆ.

ಗೆಲುವಿಗೆ 28 ಮತ ಬೇಕಿತ್ತು ವಿಧಾನಸಭೆಯ ಒಟ್ಟು 224 ಸ್ಥಾನಗಳ ಪೈಕಿ ಸದ್ಯ 222 ಸದಸ್ಯರಿದ್ದಾರೆ. ಮಾಜಿ ಸಚಿವ ಡಿ.ಸುಧಾಕರ್‌ ನಿಧನ ಹಾಗೂ ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ಅನರ್ಹತೆಯಿಂದ 2 ಸ್ಥಾನಗಳು ತೆರವಾಗಿದ್ದವು. ಅಭ್ಯರ್ಥಿಯ ಗೆಲುವಿಗೆ ಮೊದಲ ಪ್ರಾಶಸ್ತ್ಯದಡಿ 28 ಮತಗಳ ಅಗತ್ಯವಿತ್ತು. ಗುರುವಾರ ಬೆಳಗ್ಗೆ 9ರಿಂದ ಸಂಜೆ 4 ವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಿತು. ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಿತು.

ಸ್ಪರ್ಧಿಸಿದ್ದ ಯಾರಿಗೆ ಎಷ್ಟು ಮತಗಳನ್ನು ಪಡೆದಿದ್ದಾರೆ: 

ಬಿಕೆ ಪರಿಪ್ರಸಾದ್‌ - 30 ತಿಪ್ಪಣ್ಣಪ್ಪ ಕಾಮಕನೂರ್ - 30

ಪಿ ವಿ ಮೋಹನ್ - 29 ಆರ್‌ ರಘು - 29

ಶಿವಣ್ಣ ಮಳವಳ್ಳಿ - 30 ಗೋವಿಂದ ರಾಜು - 14

ವಿನಯ್ ಕಾರ್ತಿಕ್‌ - 32 ಲಿಂಗರಾಜ್ ಪಾಟೀಲ್ - 27 ಮತಗಳನ್ನು ಪಡೆದಿದ್ದಾರೆ.

11 ಹೆಚ್ಚುವರಿ ಮತ ಪಡೆದ ಆಡಳಿತ ಪಕ್ಷ ಕಾಂಗ್ರೆಸ್‌

ಜೆಡಿಎಸ್‌ ಹಾಗೂ ಬಿಜೆಪಿಯ ಮತಗಳು ಕಾಂಗ್ರೆಸ್‌ ಪಾಲಾಗಿವೆ. ಹೀಗಾಗಿಯೇ, 4 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯವಿದ್ದ ಕಾಂಗ್ರೆಸ್‌ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್‌ನ ಗೆಲ್ಲಿಸಿಕೊಂಡಿದೆ.

- Advertisement -