Loading...

ಸಚಿವ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್; ಇವರುಲ್ಲಾ ಮಂತ್ರಿಯಾಗೋದು ಬಹುತೇಕ ಖಚಿತವೇ?

Suddi Mitra Editor

July 29, 2026 • 08:04 AM

ಸಚಿವ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್; ಇವರುಲ್ಲಾ ಮಂತ್ರಿಯಾಗೋದು ಬಹುತೇಕ ಖಚಿತವೇ?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಂತಿಮ ಘಟ್ಟ ತಲುಪಿದ್ದು, ದೆಹಲಿಯಲ್ಲಿ ನಡೆದ ಸರಣಿ ಸಭೆಗಳ ಬಳಿಕ ಸಂಭಾವ್ಯ ಸಚಿವರ ಪಟ್ಟಿಯ ಕುರಿತು ಮಹತ್ವದ ಚರ್ಚೆ ನಡೆದಿದೆ. ಮಂಗಳವಾರ ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಲವು ಹೆಸರುಗಳ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿದ್ದು, ಬಹುತೇಕ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಆದರೆ ಕೆಲವು ಸ್ಥಾನಗಳ ಕುರಿತು ಇನ್ನೂ ಗೊಂದಲ ಉಳಿದಿರುವ ಕಾರಣ ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ರಾಹುಲ್ ಗಾಂಧಿ ಅನುಪಸ್ಥಿತಿಯಿಂದ ಮಂಗಳವಾರದ ಸಭೆಯಲ್ಲಿ ಅಂತಿಮ ನಿರ್ಧಾರವಾಗದ ಹಿನ್ನೆಲೆಯಲ್ಲಿ, ಬುಧವಾರ ಸಂಜೆ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಮತ್ತೊಂದು ಮಹತ್ವದ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಬಾಕಿ ಉಳಿದಿರುವ 4–5 ಸಚಿವ ಸ್ಥಾನಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಬಳಿಕ ರಾಜ್ಯ ನಾಯಕರು ಬೆಂಗಳೂರಿಗೆ ಮರಳಲಿದ್ದು, ಗುರುವಾರ ಬೆಳಿಗ್ಗೆ ಅಧಿಕೃತ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಎಲ್ಲವೂ ಯೋಜನೆಯಂತೆ ನಡೆದರೆ ಗುರುವಾರ ಸಂಜೆ ಎರಡನೇ ಹಂತದ ಸಚಿವ ಸಂಪುಟ ಸದಸ್ಯರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಯಿದೆ.

ಇವರಿಗೆಲ್ಲಾ ಮಂತ್ರಿಗಿರಿ ಫಿಕ್ಸಾ? ಸಂಭಾವ್ಯ ಸಚಿವರ ಪಟ್ಟಿ

ಲಕ್ಷ್ಮಣ ಸವದಿ, ಪುಟ್ಟರಂಗಶೆಟ್ಟಿ ,ಸಲೀಂ ಅಹ್ಮದ್

ಎಂ. ಕೃಷ್ಣಪ್ಪ, ಚೆಲುವರಾಯಸ್ವಾಮಿ, ಎಸ್.ಎಸ್. ಮಲ್ಲಿಕಾರ್ಜುನ್, ರಘುಮೂರ್ತಿ ,ರುದ್ರಪ್ಪ ಲಮಾಣಿ

ಮಧು ಬಂಗಾರಪ್ಪ , ಅಜಯ ಸಿಂಗ್

ಅಪಾಜಿ ನಾಡಗೌಡ / ಯಶವಂಶ ರಾಯಗೌಡ ಪಾಟೀಲ್

ಬಸವರಾಜ ರಾಯರೆಡ್ಡಿ / ಶಿವರಾಜ ತಂಗಡಗಿ

ಶ್ರೀನಿವಾಸ ಮಾನೆ / ಸಂತೋಷ ಲಾಡ್

ಜಮೀರ್ ಅಹ್ಮದ್ / ತನ್ನೀರ್ ಸೇಠ್ / ರಿಜ್ವಾನ್ ಅರ್ಷದ್

ತರೀಕೆರೆ ಶ್ರೀನಿವಾಸ್ / ಆರತಿ ಕೃಷ್ಣ

ಆನೇಕಲ್ ಶಿವಣ್ಣ / ನರೇಂದ್ರಸ್ವಾಮಿ / ಎಚ್.ಸಿ. ಮಹದೇವಪ್ಪ

ಅನ್ನಪೂರ್ಣ ತುಕಾರಾಂ / ಬಿ. ನಾಗೇಂದ್ರ

ಗುಬ್ಬಿ ವಾಸು / ಶಿವಲಿಂಗೇಗೌಡ / ಶರತ್ ಬಚ್ಚೇಗೌಡ


- Advertisement -