Loading...

ಸತೀಶ್ ಜಾರಕಿಹೊಳಿ ಹೇಳಿಕೆಗೆ ಸಿಎಂ ಟಾಂಗ್! ಪತ್ರಿಕಾಗೋಷ್ಠಿ ನಡೆಸಿದರು ಆರ್ಥಿಕ ಹೊರೆ: ಇತಿಹಾಸ ಸೃಷ್ಟಿಸುವ ಆಡಳಿತ ನೀಡುವೆ- DK Shivukumar

Suddi Mitra Editor

June 04, 2026 • 11:09 AM

ಸತೀಶ್ ಜಾರಕಿಹೊಳಿ ಹೇಳಿಕೆಗೆ  ಸಿಎಂ ಟಾಂಗ್! ಪತ್ರಿಕಾಗೋಷ್ಠಿ ನಡೆಸಿದರು ಆರ್ಥಿಕ ಹೊರೆ: ಇತಿಹಾಸ ಸೃಷ್ಟಿಸುವ ಆಡಳಿತ ನೀಡುವೆ- DK Shivukumar


ಬೆಂಗಳೂರು: ರಾಜ್ಯದ ಅಧಿಕಾರಿಗಳು ಜನರ ಭಾವನೆಗಳಿಗೆ ದಕ್ಕೆ ಅಗದೆ ಅವರ ಸಮಸ್ಯೆಗಳನ್ನು ಅರಿತು ಪರಿಹಾರ ಪರಿಹರಿಸುವ ಕೆಲಸ ಆಗಬೇಕು ಹದಿನೈದು ದಿನಗಳಲ್ಲಿ ಎಲ್ಲ ಇಲಾಖೆಯ ಹೊಸ ಯೋಜನೆಗಳನ್ನು ಸಿದ್ದಪಡಿಸಿ ನೀಡಬೇಕೆಂದು ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ ಸೂಚಿಸಲಾಗಿದೆ ಎಂದು ತಿಳಿಸಿದರು.

ಇಂದು ವಿಧಾನಸೌಧದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆ ಮುಗಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 

  ಜನಪರ ಪಾರ್ದರ್ಶಕ ಆಡಳಿತ ನೀಡುವೆ ನಾನು ಇತಿಹಾಸ ಓದುದೆ ಇತಿಹಾಸ ಸೃಷ್ಟಿ ಮಾಡಬೇಕೆಂದು ನನ್ನಾಶೆ ಇದಕ್ಕೆ ನನ್ನ ಸಚಿವ ಸಂಪುಟದ ಬಳಗ ಹಾಗೂ ಅಧಿಕಾರಿಗಳು ಸಾಥ ನೀಡುತ್ತಾರ ಎಂದು ಹೇಳಿದರು.

ಕಾನೂನು ಬಾಹಿರ ಕೆಲಸಕ್ಕೆ ಕಡಿವಾಣ:ನಾನೆ ಆಗಿಲಿ ನನ್ನ ಸಚಿವರು, ಶಾಸಕರು ಕಾನೂನ ಮೀರಿ ಕೆಲಸ ಮಾಡಬಾರದು 

ಸರ್ಕಾರದ ನಿಯಮದ ಪ್ರಕಾರ ಕೆಲಸ ಮಾಡಬೇಕು ಯಾರ ಮಾತಿಗೂ ಮಣೆ ಹಾಕದೆ ಕೇವಲ ಜನರ ಕೆಲಸ ಮಾತ್ರ ಮಾಡಬೇಕು.

ಪ್ರತಿ ಜಿಲ್ಲಾ ಉಸ್ತವಾರಿ ಅಧಿಕಾರಿಗಳು ಜಿಲ್ಲೆಗೆ ಮಾತ್ರ ಭೆಟಿ ನೀಡದೆ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ಸೂಚಿಸಲಾಗಿದೆ.

ದೇಶದಲ್ಲೇ ಕೇರಳ ರಾಜ್ಯ ಹೊರತುಪಡಿಸಿ ಬೇರೆಬೇರೆ ರಾಜ್ಯದಲ್ಲಿ ಲಕ್ಷಾಂತರ ಜನರು ಮತದಾನ ಹಕ್ಕು ಕಳೆದು ಕೊಂಡಿದ್ದಾರೆ ಹಾಗಾಗಿ ನಮ್ಮ ಅಧಿಕಾರಿಗಳು ಅಚ್ಚು ಕಟ್ಟಾಗಿ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಹೊಸ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ಪ್ರತಿಭಟನೆ ಮಾಡವರ ಬೇಡಿಕೆಯನ್ನು ಸ್ಪಂದಿಸುವ ಕಾರ್ಯ ಮಾಡಲು ಪ್ರತ್ಯೇಕವಾಗಿ ಒಬ್ಬ ಸಚಿವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ.

CSR ದಲ್ಲಿ 8 ಸಾವಿರ ಕೋಟಿ ಬಳಕೆ ಮಾಡುವ ಕುರಿತು ಎಲ್ಲ ಮಾಹಿತಿಯನ್ನು ನೀಡಲು ಸೂಚಿಸಿದೆ ಪ್ರತಿ ಪಂಚಾಯತಿಗೆ ಮೂರು ಶಾಲೆ ಪ್ರಾರಂಭ ಮಾಡಲಾಗುತ್ತದೆ.ಮತ್ತು 

ಶಾಲೆಗಳ ಮೂಲಭತ ಸೌಕರ್ಯ ಪೀಠೋಪಕರಣಗಳು ಬೇಡಿಕೆ ಆದರಾದ ಮೇಲೆ ಪೂರೈಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಎಂದರು.

ರೌಡಿಗಳನ್ನು ಮಟ್ಟ ಹಾಕಲು ಕ್ರಮ : ಪ್ರತಿ ತಾಲ್ಲೂಕಿಗೆ ಒಂದು ರೌಡಿಗಳನ್ನು ನಿಯಂತ್ರಣ ಮಾಡಲು ಪ್ರತ್ಯೇಕ ತಂಡ ರಚಿಸಿ ಅವರ ಚಲನವಲನ ಗಮನಿಸಿ ಅಪರಾಧಗಳನ್ನು ತಡೆಗಟ್ಟಲು ಸೂಚನೆ ನೀಡಲಾಯಿತುಎಂದರು.

ಸಚಿವ ಸತೀಶ ಜಾರಕಿಹೋಳಿ ಭಾರತ ಜೋಡೋ ಯುವಕ ಸಂಘ ಸ್ಥಾಪನೆಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಆಗಲಿದೆ ಎಂಬ ಸಿ ಎಂ ಡಿಕೆ ಶಿವಕುಮಾರ ಏನೇ ಕೆಲಸ ಮಾಡಿದರು ಆರ್ಥಿಕ ಹೋರೆ ಆಗುತ್ತದೆ ಪತ್ರಿಕಾಗೋಷ್ಠಿ ನಡೆಸಿದರು ಸರ್ಕಾರಕ್ಕೆ ಆರ್ಥಿಕ ಹೋರೆ ಆಗುತ್ತದೆ ಹಾಗೆಂದು ಬಿಡಲು ಆಗುತ್ತಾ ಎಂದು ಸಚಿವ ಸತೀಶ ಜಾರಕಿಹೋಳಿಗೆ ಟಾಂಗ್ ನೀಡಿದ ಡಿಕೆಸಿ.

- Advertisement -