Loading...

ಡಿಕೆಸಿ ಸರ್ಕಾರದಲ್ಲಿ ಡಿಸಿಎಂ ಪರಂ ಲೆಕ್ಕಗಿಲ್ಲ! ಸರ್ಕಾರಿ ಜಾಹಿರಾತಿನಲ್ಲಿ ಪರಂ ಭಾವಚಿತ್ರಕ್ಕೆ ಕತ್ತರಿ! ದಲಿತನೆಂಬ ಕಾರಣದಿಂದಾಗಿಯೇ ! ವಿಪಕ್ಷಗಳ ಆಕ್ರೋಶ

Suddi Mitra Editor

June 06, 2026 • 10:36 AM

ಡಿಕೆಸಿ ಸರ್ಕಾರದಲ್ಲಿ ಡಿಸಿಎಂ ಪರಂ ಲೆಕ್ಕಗಿಲ್ಲ!  ಸರ್ಕಾರಿ ಜಾಹಿರಾತಿನಲ್ಲಿ ಪರಂ ಭಾವಚಿತ್ರಕ್ಕೆ ಕತ್ತರಿ! ದಲಿತನೆಂಬ ಕಾರಣದಿಂದಾಗಿಯೇ ! ವಿಪಕ್ಷಗಳ ಆಕ್ರೋಶ

ಬೆಂಗಳೂರು: ಸಮಾನತೆ, ಸಾಮಾಜಿಕ ನ್ಯಾಯದ ಜಪ ಮಾಡುವ ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಗೊಂದು ಜ್ವಲಂತ ಸಾಕ್ಷಿ ಇಲ್ಲಿದೆ! ಕಳೆದ ವರ್ಷ ತಾವೇ ಉಪಮುಖ್ಯಮಂತ್ರಿಯಾಗಿದ್ದಾಗ ಪತ್ರಿಕಾ ಜಾಹೀರಾತಿನಲ್ಲಿ ತಮ್ಮ ಫೋಟೋ ಇರಲೇಬೇಕು ಎಂದು ನಿಯಮ ಪಾಲಿಸುವಂತೆ ಮಾಡಿದ್ದ ಡಿ ಕೆ ಶಿವಕುಮಾರ ಅವರೇ, ಇಂದು ಹಿರಿಯ ನಾಯಕ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರ ಭಾವಚಿತ್ರಕ್ಕೆ ಕತ್ತರಿ ಹಾಕಿದ್ದೇಕೆ? 

ಹಿಂದುಳಿದ ವರ್ಗಗಳ ಮಹಾನ್ ನಾಯಕ ದೇವರಾಜ ಅರಸು ಅವರ ಪುಣ್ಯಸ್ಮರಣೆಯ ಸರ್ಕಾರಿ ಜಾಹೀರಾತಿನಲ್ಲೇ ದಲಿತ ನಾಯಕರೊಬ್ಬರನ್ನು ಹೀಗೆ ತೆರೆಮರೆಗೆ ಸರಿಸಿದ್ದು ನಿಮ್ಮ ಸೈಡ್‌ಲೈನ್ ಪಾಲಿಟಿಕ್ಸ್‌ಗೆ ಅಂಕುರಾರ್ಪಣೆಯೇ?

ಇದು ಒನ್ ಮ್ಯಾನ್ ಶೋ ಪ್ರಚಾರದ ಹಪಾಹಪಿಯನ್ನಷ್ಟೇ ತೋರಿಸುತ್ತದೆ. ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುವ ಕಾಂಗ್ರೆಸ್ಸಿನ ಈ ಅಹಂಕಾರದ ಧೋರಣೆ ಇಂದು ಜಾಹೀರಾತಿನಲ್ಲಿ ಮೂಡಿಬಂದಿದೆ. 

ಡಿಕೆಶಿ ಶಿವಕುಮಾರ ದಲಿತರ ಮೇಲೆ ಎಷ್ಟು ಕಾಳಜಿಯನ್ನು ಹೊಂದಿರುವುದು ಕಂಡುಬರುತ್ತದೆ. ಸ್ವಾರ್ಥ ರಾಜಕೀಯ ಬಿಟ್ಟು ತಾವು ಈ ಹಿಂದೆ ಏನು ಸೌಲಭ್ಯಗಳನ್ನು ಪಡೆದುಕೊಂಡಿದು ಈಗ ಇರುವ ಡಿಸಿಎಂ ಪರಮೇಶ್ವರ ಅವರಿಗೆ ಸೌಲಭ್ಯ ಒದಗಿಸಬೇಕೆಂದು ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಡಿಕೆಸಿ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದೆ.

- Advertisement -