Loading...

ಡಿಕೆ ಕ್ಯಾಬಿನೆಟ್ ಪರಮೇಶ್ವರ್‌ಗೆ ಡಿಸಿಎಂ ಸ್ಥಾನ ಫಿಕ್ಸ್? ಬಿ.ಕೆ ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ? ಅಂತಿಮಗೊಂಡ ಸಂಭಾವ್ಯ ಸಚಿವರ ಫೈನಲ್ ಲಿಸ್ಟ್

Suddi Mitra Editor

June 03, 2026 • 06:45 AM

ಡಿಕೆ ಕ್ಯಾಬಿನೆಟ್  ಪರಮೇಶ್ವರ್‌ಗೆ ಡಿಸಿಎಂ ಸ್ಥಾನ ಫಿಕ್ಸ್? ಬಿ.ಕೆ ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ? ಅಂತಿಮಗೊಂಡ ಸಂಭಾವ್ಯ ಸಚಿವರ ಫೈನಲ್ ಲಿಸ್ಟ್

ಸುದ್ದಿ ಮಿತ್ರ

ಬೆಂಗಳೂರು ಜೂ.03: ದೆಹಲಿಯಲ್ಲಿ ನಡೆದ ಹೈಕಮಾಂಡ್ ಮೀಟಿಂಗ್ ವೇಳೆ ಸಿದ್ದರಾಮಯ್ಯ ಪರಮೇಶ್ವರ್‌ಗೆ ಡಿಸಿಎಂ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ರು. ಆದ್ರೆ ಡಿಕೆಶಿ ಬಾರಿ ಡಿಸಿಎಂ ಸ್ಥಾನ ಬೇಡ, ಅಧಿಕಾರ ಹಂಚಿಕೆ ತಲೆಬಿಸಿ ಬೇಡ ಅಂದಿದ್ದರಂತೆ. ಆದ್ರೆ ಹೈಕಮಾಂಡ್ ಡಾ ಜಿ ಪರಮೇಶ್ವರ್ ಒಬ್ಬರಿಗೆ ಡಿಸಿಎಂ ಹುದ್ದೆ ಫೈನಲ್ ಮಾಡಿದೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಸತೀಶ್ ಜಾರಕಿಹೊಳಿಗೆ ಕೋಕ್ ನೀಡಿ ಬಿ.ಕೆ ಹರಿಪ್ರಸಾದ್ ಅವರಿಗೆ ಮನೆ ಹಾಕಿದೆ ಎಂದು ತಿಳಿದು ಬಂದೆ.

 ಕೊಂಚವೂ ಸಮಸ್ಯೆ ಆಗದೆ ಕಾಂಗ್ರೆಸ್ ನಾಯಕತ್ವ ಬದಲಾವಣೆ ಆಗಿದೆ. ಆದ್ರೆ ಹೈಕಮಾಂಡಗೆ ಸಂಪುಟ ರಚನೆಯೇ ದೊಡ್ಡ ತಲೆಬಿಸಿ ಆಗಿತ್ತು. ಸ್ಥಾನ ಬಿಟ್ಟು ಕೊಟ್ಟ ಸಿದ್ದರಾಮಯ್ಯ ಒಂದು ಕಡೆಯಾದ್ರೆ, ಮತ್ತೊಂದೆಡೆ ನೂತನ ಸಿಎಂ ಡಿಕೆ ಶಿವಕುಮಾ‌ರ್ ಪಟ್ಟು. ಇಬ್ಬರ ಲಿಸ್ಟ್ ನೋಡಿ ತಲೆಕೆಡಿಸಿಕೊಂಡ ಹೈಕಮಾಂಡ್‌, ಕೊನೆಗೂ ಸಚಿವರು ಹಾಗೂ ಉಪಮುಖ್ಯಮಂತ್ರಿಯನ್ನ ಫೈನಲ್ ಮಾಡಿದ್ದಾರೆ ಎಂಬ ವಿಚಾರ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

- Advertisement -