Loading...

ಹೋಟೆಲ್ ಉದ್ಯಮಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ಜಗದೀಶ್ ಗುಡಗುಂಟಿ: ಸ್ವಚ್ಛತೆ, ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಿ; ಕಾರ್ಮಿಕ ಕಲ್ಯಾಣಕ್ಕೂ ಒತ್ತು

Suddi Mitra Editor

July 27, 2026 • 05:58 AM

ಹೋಟೆಲ್ ಉದ್ಯಮಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ಜಗದೀಶ್ ಗುಡಗುಂಟಿ:   ಸ್ವಚ್ಛತೆ, ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಿ; ಕಾರ್ಮಿಕ  ಕಲ್ಯಾಣಕ್ಕೂ ಒತ್ತು

ಜಮಖಂಡಿ: ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಶಾಸಕ ಜಗದೀಶ್ ಗುಡಗುಂಟಿ ಅವರು ನಗರದ ಬಸ್ ನಿಲ್ದಾಣದ ಎದುರುಗಡೆಯಿರುವ ಉಪಹಾರ ಡಿಲಕ್ಸ್ ಹೋಟೆಲ್‌ಗೆ ದಿಡಿರ್ ಭೇಟಿ ನೀಡಿ, ಹೋಟೆಲ್ ಮಾಲಿಕರು ಹಾಗೂ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಅವರ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಆಲಿಸಿದರು.

ಹೋಟೆಲ್‌ನ ಸ್ವಚ್ಛತೆ, ಆಹಾರದ ಗುಣಮಟ್ಟ ಹಾಗೂ ಗ್ರಾಹಕರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಸ್ಥಳದಲ್ಲೇ ಪರಿಶೀಲನೆ ನಡೆಸಿದ ಶಾಸಕರು, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಹೋಟೆಲ್ ಮಾಲಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು. ರಾಸಾಯನಿಕ ಮಿಶ್ರಿತ ಆಹಾರವನ್ನು ಬಳಸದೆ, ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರವನ್ನು ಗ್ರಾಹಕರಿಗೆ ಒದಗಿಸುವಂತೆ ಸಲಹೆ ನೀಡಿದರು.

ಹೋಟೆಲ್ ಸಿಬ್ಬಂದಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಅವರು, ಸರ್ಕಾರದಿಂದ ಕಾರ್ಮಿಕರಿಗಾಗಿ ಜಾರಿಯಲ್ಲಿರುವ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ತಪ್ಪದೆ ಪಡೆದುಕೊಳ್ಳಬೇಕು ಎಂದರು. ಕಾರ್ಮಿಕ ಕಾರ್ಡ ಹೊಂದಿರದವರು ಕೂಡಲೇ ನೋಂದಣಿ ಮಾಡಿಸಿಕೊಂಡು ರ‍್ಕಾರದ ಸೌಲಭ್ಯಗಳ ಪ್ರಯೋಜನ ಪಡೆಯುವಂತೆ ಸೂಚಿಸಿದರು. ಜೊತೆಗೆ, ಗ್ರಾಹಕರೊಂದಿಗೆ ಸೌಜನ್ಯಯುತವಾಗಿ, ವಿನಯದಿಂದ ಹಾಗೂ ಗೌರವದಿಂದ ರ‍್ತಿಸುವುದು ಹೋಟೆಲ್‌ನ ಉತ್ತಮ ಹೆಸರಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಶಾಸಕ ಜಗದೀಶ್ ಗುಡಗುಂಟಿ ಅವರು ಹೋಟೆಲ್ ಮಾಲಿಕ ಅರುಣ ಶೆಟ್ಟಿ ಅವರೊಂದಿಗೆ ಮಾತುಕತೆ ನಡೆಸಿ, ವಿದ್ಯುತ್, ಕುಡಿಯುವ ನೀರು ಹಾಗೂ ಒಳಚರಂಡಿ (ಡ್ರೈನೇಜ್) ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಮುಕ್ತವಾಗಿ ತಿಳಿಸಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರುಣ ಶೆಟ್ಟಿ ಅವರು ಹೋಟೆಲ್‌ಗೆ ಎದುರಾಗಿರುವ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಜಗದೀಶ್ ಗುಡಗುಂಟಿ ಭರವಸೆ ನೀಡಿದರು.

ಭೇಟಿಯ ಅಂತ್ಯದಲ್ಲಿ ಹೋಟೆಲ್ ಮಾಲಿಕರು ಮತ್ತು ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಬೆರೆತ ಶಾಸಕ ಜಗದೀಶ್ ಗುಡಗುಂಟಿ, ಅಲ್ಲಿಯೇ ಉಪಹಾರ ಸೇವಿಸಿ ಅವರ ಆತಿಥ್ಯವನ್ನು ಸ್ವೀಕರಿಸಿದರು. ಈ ಭೇಟಿ ಹೋಟೆಲ್ ಉದ್ಯಮಿಗಳು ಮತ್ತು ಸಿಬ್ಬಂದಿಯಲ್ಲಿ ಹೊಸ ಉತ್ಸಾಹ ಮೂಡಿಸಿತು.ಇದೇ ಸಂದರ್ಭದಲ್ಲಿ ಭಾಜಪ ನಗರ ಮಂಡಲ ಅದ್ಯಕ್ಷ ಅಜಯ ಕಡಪಟ್ಟಿ, ಡಾ. ಮಲ್ಲಿಕರ‍್ಜುನಯ್ಯ ಮಠ, ಆರೀಫ್ ಪೆಂಡಾರಿ,ಸಂತೋಷ ಶೆಟ್ಟಿ ಶಾಸಕರೊಂದಿಗೆ ಇದ್ದರು.

- Advertisement -