Loading...

ಮಂಡಳಿಯ ಅನುಮೋದನೆಯಿಲ್ಲದೆ ಸುತ್ತೋಲೆ ಮ್ಯಾನೇಜರ್ ಶಾಕ್! *ವಿವಾದಗಳಿಗೆ ಅಧಿಕೃತ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡಿದ ಜಮಖಂಡಿ ಶುಗರ್ಸ್'

Suddi Mitra Editor

October 20, 2026 • 09:40 AM

ಮಂಡಳಿಯ ಅನುಮೋದನೆಯಿಲ್ಲದೆ ಸುತ್ತೋಲೆ ಮ್ಯಾನೇಜರ್ ಶಾಕ್!  *ವಿವಾದಗಳಿಗೆ ಅಧಿಕೃತ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡಿದ ಜಮಖಂಡಿ ಶುಗರ್ಸ್'

ಜಮಖಂಡಿ : ರೈತನ ಪವರ್ ಏನು ಎಂಬುದನ್ನು ತೋರಿಸಿಕೊಟ್ಟಿದ್ದು ಜಮಖಂಡಿ ಶುಗರ್ಸ್. ದೇಶದ ಮೊಟ್ಟ ಮೊದಲ ರೈತ ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿ ಇತಿಹಾಸ ಬರೆದಿದೆ. ರೈತರು ಮನಸ್ಸು ಮಾಡಿದರೆ ಕಾರ್ಖಾನೆಯನ್ನೇ ಕಟ್ಟಬಹುದು ಎಂಬುದಕ್ಕೆ ದಿ.ಸಿದ್ಧು ನ್ಯಾಮಗೌಡರ ಸಾರಥ್ಯ ಹಾಗೂ ಆಶಯಗಳೊಂದಿಗೆ ಅರಳಿದ್ದು ಜಮಖಂಡಿ ಶುಗರ್ಸ್. ಆದರೆ ಈ ಜಮಖಂಡಿ ಶುಗರ್ಸ್ ವಿವಾದಗಳ ಗೂಡಾಗಿರುವುದು ವಿಪರ್ಯಾಸ.

ಜಮಖಂಡಿ ಶುಗರ್ಸ್ ನಲ್ಲಿ ಕೇಳಿ ಬಂದಿರುವ ಅವ್ಯಹಾರ, ಹಣಕಾಸು ಅಧಿಕಾರಿಯ ಅಪಹರಣ ಹೀಗೆ ಅನೇಕ ಅಪಕೀರ್ತಿಯ ಆರೋಪ, ಗೊಂದಲಗಳಿಗೆ ಈ ಆನಂದ ನ್ಯಾಮಗೌಡರೇ ಕಾರಣ ಎಂಬ ಆರೋಪ ಹಾಗೂ ಅವರ ಮೇಲೆ ದಾಖಲಾಗಿರುವ ಪ್ರಕರಣಗಳು ಒತ್ತಿ ಒತ್ತಿ ಹೇಳುತ್ತಿರುವುದು ಇನ್ನೊಂದು ದೊಡ್ಡ ದುರಂತ. 

ಈಗ ಮತ್ತೊಂದು ವಿವಾದ ಅವರಿಗೆ ಅಂಟಿಕೊಂಡಿದ್ದೆ,  ಸಾಮಾಜಿಕ ಜಾಲತಾಣದಲ್ಲಿ ಕಾರ್ಖಾನೆಯ ಬಾಯ್ಲರ್ ಪೂಜೆಗೆ ಆಹ್ವಾನಿಸುವ ಕೋರಿಕೆಯ ಫೋಸ್ಟರ್ ಪೂರಕವಾಗಿ ಕಂಪನಿಯು 2026-27ನೇ ಹಂಗಾಮಿನ ಬಾಯ್ಲರ್ ಪೂಜೆ ಸಮಾರಂಭದ ಕುರಿತು ನಿರ್ದೇಶಕರ ಮಂಡಳಿಯ ಪೂರ್ವಾನುಮೋದನೆ ಪಡೆಯದೆ ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ, ಜಮಖಂಡಿ ಶುಗರ್ಸ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್‌ಗೆ ಕಾರಣ ಕೇಳುವ ನೋಟಿಸ್ ನೀಡಲಾಗಿದೆ. ಅಲ್ಲದೆ, ಸದರಿ ಈಗ ಹೊೊರಡಿಸಿದ ಸುತ್ತೋಲೆಯನ್ನು ತಕ್ಷಣ ಹಿಂಪಡೆದು, ಸಂಬಂಧಪಟ್ಟವರಿಗೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ. ಹೀಗಾಗಿ ಮತ್ತೊಮ್ಮೆ ಆನಂದ ನ್ಯಾಮಗೌಡರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. 

ಇನ್ನೊಂದೆಡೆ ಜಮಖಂಡಿ ಶುಗರ್ಸ್ ಸಹ ಸುದೀರ್ಘವಾದ ಸಾರ್ವಜನಿಕ ಪತ್ರವನ್ನು ಬಿಡುಗಡೆ ಮಾಡಿದ್ದು, ಕಂಪನಿಯ ನಿರ್ವಹಣೆ, ನಿಯಂತ್ರಣ ಮತ್ತು ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಮಹತ್ವದ ಸ್ಪಷ್ಟನೆ ನೀಡಿದೆ. ಅದರಲ್ಲಿ ಸ್ಪಷ್ಟವಾಗಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಹೆಸರನ್ನು ಉಲ್ಲೇಖಿಸಿ ಸ್ಪಷ್ಟೀಕರಣ ನೀಡಲಾಗಿದೆ, ಅವರ ಹೆಸರಿನಲ್ಲಿ ನೀಡಲಾಗುವ ಹೇಳಿಕೆಗಳನ್ನು ಒಳಗೊಂಡಂತೆ ಸ್ಪಷ್ಟೀಕರಣ ನೀಡಿದೆ.

ಈ ಮುಂಚೆ ಇದ್ದ ಪ್ರೈವೇಟ್ ಲಿಮಿಟೆಡ್ ಈಗ `ಕಂಪನಿ'ಯಾಗಿ ಪರವರ್ತನೆಗೊಂಡಿದ್ದು, ನಿರ್ವಹಣೆಯ ಪ್ರತಿನಿಧಿತ್ವವವನ್ನು ರಾಜೀವ ಕಡಪಟ್ಟಿ ಅವರ ನೇತೃತ್ವದ ನಿರ್ದೇಶಕ ಮಂಡಳಿ ವಹಿಸಿಕೊಂಡಿದೆ ಎಂದು ಕಂಪನಿ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ನಿರ್ದೇಶಕರ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಲಕ್ಷ್ಮಣ ಸವದಿ, ರಾಜೇಂದ್ರ ಪಾಟೀಲ, ನೀರಜ್ ಚಂದ್ರ, ಗುರುಲಿಂಗಪ್ಪ ನ್ಯಾಮಗೌಡ, ಪದ್ಮಣ್ಣ ಜಕನೂರ, ಅಣ್ಣಪ್ಪ ಹುದ್ದಾರ, ಸಾಗರ ಸೂರ್ಯಕಾಂತ ಮೋಹಿತೆ, ಸಂಜೀವ ಅವಕ್ಕನವರ, ಪ್ರಶಾಂತ ಬಿಡಾರಿ ಅವರು ನಿರ್ದೇಶಕರಾಗಿರುತ್ತಾರೆ ಎಂದು ಹೇಳಿದೆ.  

ಕಂಪನಿಯ ನಿರ್ವಹಣೆ, ನಿರ್ಧಾರಗಳು ಮತ್ತು ವ್ಯವಹಾರಗಳಿಗೆ ಸಂಬಂಧಿಸಿದ ಅಧಿಕೃತ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ಕಂಪನಿಯಿಂದ ಅಥವಾ ಕಂಪನಿಯ ಪರವಾಗಿ ಅಧಿಕೃತವಾಗಿ ಅಧಿಕಾರ ಪಡೆದ ಪ್ರತಿನಿಧಿಗಳಿಂದ ನೇರವಾಗಿ ಪಡೆಯುವಂತೆ ಕಂಪನಿ ಅಧಿಕೃತ ಪ್ರಕಟಣೆಯಲ್ಲಿ ಸಾರಿದೆ.

ವದಂತಿ ನಂಬಬೇಡಿ 

ಜಮಖಂಡಿ ಶುಗರ್ಸ್ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಆನಂದ ನ್ಯಾಮಗೌಡ ಅಥವಾ ಕಂಪನಿಯ ಪರವಾಗಿ ಸಂವಹನ ನಡೆಸಲು ಅಧಿಕೃತ ಅಧಿಕಾರ ಹೊಂದಿರದ ಇತರ ಯಾವುದೇ ವ್ಯಕ್ತಿಯಿಂದ ಹರಡಬಹುದಾದ ವದಂತಿಗಳು, ತಪ್ಪು ದಾರಿಗೆಳೆಯುವ ಹೇಳಿಕೆಗಳು ಅಥವಾ ಪರಿಶೀಲಿಸದ ಮಾಹಿತಿಯನ್ನು ನಂಬಬಾರದು, ಅವುಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬಾರದು ಹಾಗೂ ಅವುಗಳನ್ನು ಇತರರಿಗೆ ಹರಡಬಾರದು ಎಂದು ಕಂಪನಿಯು ಎಲ್ಲಾ ಷೇರುದಾರರು, ರೈತರು, ಉದ್ಯೋಗಿಗಳು, ಪೂರೈಕೆದಾರರು, ಗ್ರಾಹಕರು, ವ್ಯವಹಾರ ಪಾಲುದಾರರು ಮತ್ತು ಸಾರ್ವಜನಿಕರಲ್ಲಿ ಕಂಪನಿ ಅಧಿಕೃತ ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದೆ.  

ಕಂಪನಿಯು ಸ್ವತಃ ಅಥವಾ ಕಂಪನಿಯ ಪರವಾಗಿ ಅಧಿಕೃತವಾಗಿ ಅಧಿಕಾರ ಪಡೆದ ವ್ಯಕ್ತಿಯು ಹೊರಡಿಸದ ಯಾವುದೇ ಹೇಳಿಕೆ, ಪ್ರಕಟಣೆ, ಸಂದೇಶ ಅಥವಾ ಸಂವಹನವನ್ನು ಕಂಪನಿಯ ಅಧಿಕೃತವಲ್ಲ ಎಂದು ಸ್ಪಷ್ಟಪಡಿಸಿದೆ.

ಯಾವುದೇ ಮಾಹಿತಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವ ಮೊದಲು ಅಥವಾ ಅದನ್ನು ಸಾಮಾಜಿಕ ಜಾಲತಾಣಗಳು, ಸಂದೇಶ ರವಾನೆ ವೇದಿಕೆಗಳು ಅಥವಾ ಇತರ ಯಾವುದೇ ಮಾಧ್ಯಮಗಳ ಮೂಲಕ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಎಲ್ಲಾ ಪಾಲುದಾರರಲ್ಲಿ ವಿನಂತಿಸಲಾಗುತ್ತದೆ.

ಆನಂದ ನ್ಯಾಮನಗೌಡರ ಅನಧಿಕೃತ ಪ್ರವೇಶದ ಉಲ್ಲೇಖ

ಕಂಪನಿ ನೀಡಿರುವ ಸ್ಪಷ್ಟೀಕರಣದಲ್ಲಿ ಆನಂದ ನ್ಯಾಮಗೌಡ ಅವರು ಕೆಲವು ವ್ಯಕ್ತಿಗಳೊಂದಿಗೆ ಸೇರಿ, ಕಂಪನಿಯ ಮಾನ್ಯ ನಿರ್ವಹಣಾ ಅಧಿಕಾರವಿಲ್ಲದೆ ಕಂಪನಿಯ ನಿರ್ವಹಣೆ ಮತ್ತು ಕಾರ್ಯಾಚರಣೆಗಳಲ್ಲಿ ಹಸ್ತಕ್ಷೇಪ ಮಾಡಲು ಹಾಗೂ ಕಂಪನಿಯ ವ್ಯವಹಾರಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ್ದಾರೆ ಎಂಬ ಮಾಹಿತಿಯು ಕಂಪನಿಗೆ ಲಭಿಸಿದೆ. ಅಲ್ಲದೆ, ಪ್ರಸ್ತುತ ನಿರ್ವಹಣೆಯ ಸದಸ್ಯರಿಗೆ ಬೆದರಿಕೆ ಅಥವಾ ಭಯಭೀತಗೊಳಿಸುವ ಪ್ರಯತ್ನಗಳು ನಡೆದಿವೆ ಎಂಬ ಆರೋಪಗಳು ಹಾಗೂ ಆನಂದ ನ್ಯಾಮಗೌಡ ಮತ್ತು ಅವರೊಂದಿಗೆ ಬಂದ ವ್ಯಕ್ತಿಗಳು ಕಂಪನಿಯ ಅನುಮತಿಯಿಲ್ಲದೆ ಅಥವಾ ಅಗತ್ಯವಿರುವ ಕಾನೂನುಬದ್ಧ ಅಧಿಕಾರವಿಲ್ಲದೆ ಕಂಪನಿಯ ಕಾರ್ಖಾನೆ ಆವರಣ ಮತ್ತು ಕಚೇರಿಗಳಿಗೆ ಪ್ರವೇಶಿಸಲು ಅಥವಾ ಪ್ರವೇಶ ಪಡೆಯಲು 

ಅನಧಿಕೃತ ಹಸ್ತಕ್ಷೇಪ, ಬೆದರಿಕೆ, ಭಯಭೀತಗೊಳಿಸುವ ಕೃತ್ಯಗಳು ಅಥವಾ ಕಂಪನಿಯ ಕಾರ್ಯಾಚರಣೆಗಳಿಗೆ ಅಡ್ಡಿಪಡಿಸುವ ಘಟನೆಗಳು ದೃಢಪಟ್ಟಲ್ಲಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಹಕ್ಕನ್ನು ಕಂಪನಿಯು ಕಾಯ್ದಿರಿಸಿಕೊಂಡಿದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಕಂಪನಿ ಪ್ರಕಟಣೆಯಲ್ಲಿ ಸ್ಷಷ್ಟನೆ ಜೊತೆಗೆ ಗಂಭೀರ ಆರೋಪ

ಆನಂದ ನ್ಯಾಮಗೌಡ ಹೇಳಿಕೆ ಅಲ್ಲಗೆಳೆದ ಕಂಪನಿ

 ಮೊನ್ನೆ ಜಮಖಂಡಿ ಶುಗರ್ಸ್ ನಲ್ಲಿ ರೈತರು ಅಹವಾಲು ಸಲ್ಲಿಸಲು ಆಗಮಿಸಿದ್ದರು ಎಂಬ ಮಾಜಿ ಶಾಸಕ ಆನಂದ ನ್ಯಾಮಗೌಡರ ಹೇಳಿಕೆಯನ್ನು ಅಲ್ಲಗಳೆದೆರುವ ಕಂಪನಿಯ ಅಧಿಕೃತ ಪ್ರಕಟಣೆ ಮೊನ್ನೆ ನಡೆದ ಘಟನೆ ರೈತರ ಪಾವತಿ ಸಂಬಂಧಿತ ಅಹವಾಲುಗಳಿಗೆ ಸಂಬಂಧಿಸಿರಲಿಲ್ಲ, ಬದಲಾಗಿ ಕಂಪನಿಯ ಹಣಕಾಸು ಅಧಿಕಾರಿ ರಾಜನೀಶ್ ವರ್ಮಾ ಅವರನ್ನು ಬೆದರಿಸುವುದು, ಅವರಿಗೆ ಹಾನಿ ಉಂಟುಮಾಡುವ ಉದ್ದೇಶ ಹೊಂದಿರುವುದು ಹಾಗೂ ಕಂಪನಿಯ ಅಧಿಕಾರಿಗಳು, ಉದ್ಯೋಗಿಗಳು ಮತ್ತು ನಿರ್ದೇಶಕರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿರಬಹುದೆಂಬ ಗಂಭೀರ ಆತಂಕ ಉಂಟಾಗಿದೆ. ಇಂತಹ ಕೃತ್ಯಗಳು ಕಂಪನಿಯ ನಿರ್ವಹಣೆ ಮತ್ತು ಕಾರ್ಯಾಚರಣೆಗಳ ಕಾನೂನುಬದ್ಧ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎಂದು ಕಂಪನಿ ಅಧಿಕೃತ ಸ್ಪಷ್ಟನೆ ಹೇಳಿದೆ.  

ಸಿಬ್ಬಂದಿಯ ಸುರಕ್ಷತೆ, ಕಂಪನಿಯ ನಿರ್ವಹಣೆಯ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ವ್ಯವಹಾರಗಳ ಶಾಂತಿಯುತ ಕಾರ್ಯನಿರ್ವಹಣೆಯ ಮೇಲೆ ಇಂತಹ ಆಪಾದಿತ ಕೃತ್ಯಗಳು ಬೀರಬಹುದಾದ ಪರಿಣಾಮಗಳನ್ನು ಗಮನಿಸಿ, ಕಂಪನಿಯು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ,  

ರೈತರ ನೈಜ ಅಹವಾಲುಗಳನ್ನು ಕಂಪನಿಯ ದಾಖಲೆಗಳ ಆಧಾರದ ಮೇಲೆ ಪಾರದರ್ಶಕವಾಗಿ ಹಾಗೂ ಕಾನೂನುಬದ್ಧ ಮಾರ್ಗಗಳ ಮೂಲಕ ಪರಿಹರಿಸಬೇಕು. ಈ ಘಟನೆಯನ್ನು ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಿಗೆ ವರದಿ ಮಾಡಲಾಗಿದ್ದು, ಕಾನೂನಿನ ಪ್ರಕಾರ ತನಿಖೆ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಕಂಪನಿ ಸಾರ್ವಜನಿಕರಿಗೆ ಮಾಹಿತಿಯನ್ನು ರವಾನಿಸಿದೆ.

- Advertisement -