Loading...

ಕೆ ಎಚ್ ಮುನಿಯಪ್ಪ ಫುಲ್ ಖುಷ್! ರಾಮಲಿಂಗಾರೆಡ್ಡಿ ಕುರಿತು ಮೌನ ಮುರಿದ ಮುಖ್ಯಮಂತ್ರಿ ಡಿಕೆಸಿ

Suddi Mitra Editor

June 05, 2026 • 01:58 PM

ಕೆ ಎಚ್ ಮುನಿಯಪ್ಪ ಫುಲ್ ಖುಷ್! ರಾಮಲಿಂಗಾರೆಡ್ಡಿ ಕುರಿತು ಮೌನ ಮುರಿದ  ಮುಖ್ಯಮಂತ್ರಿ ಡಿಕೆಸಿ

ಬೆಂಗಳೂರು: ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ ವಿಚಾರ ನೂತನ ಸಿಎಂ ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂದು ಬೆಳಗ್ಗೆ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾರ ಸಂಪರ್ಕಕ್ಕೆ ಸಿಗದೇ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇನ್ನು, ಈ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ಅವರು ಕೊನೆಗೂ ರಿಯಾಕ್ಟ್ ಮಾಡಿದ್ದಾರೆ.

ರಾಮಲಿಂಗಾರೆಡ್ಡಿಗೆ ನಾವು ಮಾತು ಕೊಟ್ಟಿದ್ದು ನಿಜ

ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ ಅವರಿಗೆ ನಾವು ಮಾತು ಕೊಟ್ಟಿದ್ದು ನಿಜ, ನಾನು ನನ್ನ ತಮ್ಮ ಡಿಕೆ ಸುರೇಶ್ ಹೋಗಿ ಮಾತನಾಡಿದ್ದೂ ನಿಜ, ಬೆಂಗಳೂರು ಅಭಿವೃದ್ಧಿ ಖಾತೆ ಕೊಡುಸ್ತೀವಿ ಅಂತಾ ಹೇಳಿದ್ವಿ, ಆದರೆ ಹೈಕಮಾಂಡ್ ನಿರ್ಧಾರ ಏನು ಮಾಡೋದು? ರಾಮಲಿಂಗಾರೆಡ್ಡಿಯವ್ರು ಹೊರಗಡೆ ಇದ್ದಾರೆ, ಖುದ್ದಾಗಿ ನಾನೇ ಭೇಟಿಯಾಗಿ ಮಾತನಾಡ್ತೇನೆ ಎಂದು ಹೇಳಿದರು.

ಕೆ.ಹೆಚ್ ಮುನಿಯಪ್ಪ ಜೊತೆ ಮಾತನಾಡಿದ್ದು ಆಯ್ತು ರಾಹುಲ್‌ ಗಾಂಧಿ ಹೇಳಿದ್ದು ಆಯ್ತು, ಮುನಿಯಪ್ಪ ಈಗ ಖುಷಿಯಾಗಿದ್ದಾರೆ. ಯಾವ ಖಾತೆ ಕೊಟ್ಟರೂ ಕೆಲಸ ಮಾಡ್ತೀನಿ ಅಂತಾ ಹೇಳಿದ್ದಾರೆ ಎಂದು ವಿಧಾನಸೌಧದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

- Advertisement -