Loading...

ಜನಪರ ಆರೋಗ್ಯ ಸೇವೆಗೆ ಹೊಸ ಹೆಜ್ಜೆ: ಮೆಡಿಕವರ್ ಆಸ್ಪತ್ರೆಯೊಂದಿಗೆ ನಿವಾಸಿಗಳ ಸಂಘಗಳ ಒಪ್ಪಂದ

Suddi Mitra Editor

June 21, 2026 • 01:43 AM

ಜನಪರ ಆರೋಗ್ಯ ಸೇವೆಗೆ ಹೊಸ ಹೆಜ್ಜೆ: ಮೆಡಿಕವರ್ ಆಸ್ಪತ್ರೆಯೊಂದಿಗೆ ನಿವಾಸಿಗಳ ಸಂಘಗಳ ಒಪ್ಪಂದ

ಮಹದೇವಪುರ: "ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಶ್ಲಾಘನೀಯ. ಮೆಡಿಕವರ್ ಆಸ್ಪತ್ರೆಯ ಈ ಜನಪರ ಆರೋಗ್ಯ ಸೇವಾ ಉಪಕ್ರಮವು ಸಾವಿರಾರು ಕುಟುಂಬಗಳಿಗೆ ನೆರವಾಗಲಿದೆ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಹೇಳಿದರು.

ಮೆಡಿಕವರ್ ಆಸ್ಪತ್ರೆ ಹಾಗೂ ಕ್ಷೇತ್ರದ ಕನ್ನಮಂಗಲ ಮತ್ತು ಸೀಗೆಹಳ್ಳಿ ವಾರ್ಡ್ ವ್ಯಾಪ್ತಿಯ ವಿವಿಧ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳ (RWA) ನಡುವೆ ಒಪ್ಪಂದ ಪತ್ರ (MoU) ಸಹಿ ಸಮಾರಂಭವು ಕನ್ನಮಂಗಲ ವಾರ್ಡ್‌ನ ಸುಮಧುರ ಈಡನ್ ಗಾರ್ಡನ್ಸ್ ಆವರಣದಲ್ಲಿ ನಡೆಯಿತು. 

ಸಾರ್ವಜನಿಕರು ಉತ್ತಮ ಆರೋಗ್ಯ ಸೇವೆಗಳನ್ನು ಸುಲಭವಾಗಿ ಪಡೆಯಲು ಇಂತಹ ಸಹಭಾಗಿತ್ವಗಳು ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳ ಮೂಲಕ ಮಹದೇವಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಎಲ್ಲರ ಸಹಕಾರ ಬೇಕಿದೆ”ಎಂದು ಮಂಜುಳ ಅರವಿಂದ ಲಿಂಬಾವಳಿ ಹೇಳಿದರು

ಕಾರ್ಯಕ್ರಮದಲ್ಲಿ ಮಾತನಾಡಿದ ಮೆಡಿಕವರ್ ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ, “ಸುಮಾರು 70 ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಮಹತ್ವದ ಪ್ರಯತ್ನ ಇದಾಗಿದೆ. ಮೆಡಿಕವರ್ ಆಸ್ಪತ್ರೆಯ ಆಂಬ್ಯುಲೆನ್ಸ್‌ಗಳು ದಿನದ 24 ಗಂಟೆಯೂ ನಿವಾಸಿಗಳ ಸೇವೆಗೆ ಸಿದ್ಧವಾಗಿರಲಿದ್ದು, ಈ ಸೌಲಭ್ಯಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು” ಎಂದು ಕೋರಿದರು.

ಇಲ್ಲಿನ ಅಪಾರ್ಟ್‌ಮೆಂಟ್‌ಗಳ  

ನಿವಾಸಿಗಳಿಗೆ ಉಚಿತ ಫ್ಯಾಮಿಲಿ ಹೆಲ್ತ್ ಕಾರ್ಡ್, 24x7 ಉಚಿತ ಆಂಬ್ಯುಲೆನ್ಸ್ ಸೇವೆ, ನಿಯಮಿತ ಆರೋಗ್ಯ ತಪಾಸಣಾ ಶಿಬಿರಗಳು, ಆಸ್ಪತ್ರೆಯಲ್ಲಿ ಆದ್ಯತಾ ಚಿಕಿತ್ಸಾ ಸೌಲಭ್ಯ ಹಾಗೂ ವೈದ್ಯಕೀಯ ಸೇವೆಗಳಲ್ಲಿ ವಿಶೇಷ ರಿಯಾಯಿತಿಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಹಾಗೂ ಮೆಡಿಕವರ್ ಆಸ್ಪತ್ರೆಯ ಸೆಂಟರ್ ಹೆಡ್ ಕೃಷ್ಣಮೂರ್ತಿ ಭಾಗವಹಿಸಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದರು.

- Advertisement -