ಮೆಕೇದಾಟಿಗಾಗಿ ಮತ್ತೊಂದು ಹೊಸ ಹೆಜ್ಜೆ ಹಾಕಿದ್ದ ಡಿ.ಕೆ. ಶಿವಕುಮಾರ್
ಅಪ್ಪು ಪೋತರಾಜ
ಬೆಂಗಳೂರು : ಮೇಕೆದಾಟು ಯೋಜನೆಗಾಗಿ `ಹೆಜ್ಜೆ ಹಾಕುತೇವೆ ನಾವು ಹೆಜ್ಜೆ ಹಾಕುತ್ತೇವೆ' ಎಂದು ಕೋವಿಡ್ ಕಾಲಘಟ್ಟದ ಅಪಾಯದ ನಡುವೆಯೂ ಬೃಹತ್ ಪಾದಯಾತ್ರೆ ಸಂಘಟಿಸಿದ್ದ ಡಿ.ಕೆ. ಶಿವಕುಮಾರ ಈಗ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಮೇಕೆದಾಟು ಯೋಜನೆಯ ಅನುಷ್ಠಾನಗೊಳಿಸುವ ಸಂಕಲ್ಪವನ್ನು ಅದಮ್ಯವಾಗಿ ಹೊಂದಿರುವ ಡಿ.ಕೆ. ಶಿವಕುಮಾರ ಈ ಯೋಜನೆಯಿಂದ ತಮಿಳುನಾಡಿಗೆ ಮಾರಕವಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಪೂರಕವಾಗಿ ಸಂಧಾನ ಹೆಜ್ಜೆ ಇರಿಸುವತ್ತ ಮುನ್ನಡೆದಿದ್ದಾರೆ.
ಮೇಕೆದಾಟು ಯೋಜನೆಗಾಗಿ ೨೦೨೨ರ ಜನವರಿ ಹಾಗೂ ಫೆಬ್ರವರಿ ತಿಂಗಳುಗಳಲ್ಲಿ ಈ ಪಾದಯಾತ್ರೆಯನ್ನು ನಡೆಸಲಾಗಿತ್ತು. ಇದರ ಸಂಪರ‍್ಣ ಸಾರಥ್ಯವನ್ನು ಡಿ.ಕೆ. ಶಿವಕುಮಾರ್ ಹೊತ್ತಿದ್ದರು. ಕೋವಿಡ್ ನಿಯಮ ಉಲ್ಲಂಘನೆ ಆರೋಪದ ನಡುವೆಯೂ ರಾಮನಗರದಿಂದ ಬೆಂಗಳೂರುವರೆಗೆ ಬೃಹತ್ ಪ್ರಮಾಣದಲ್ಲಿ ಈ ನಡಿಗೆ ನಡೆಯಿತು.ಸುಮಾರು ೧೭೦ ಕಿ.ಮೀ ದೂರವನ್ನು ಕ್ರಮಿಸಿ ಮರ‍್ಚ್ ೩ ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪಗೊಂಡಿತ್ತು.
ಕೋವಿಡ್ ಕಾಲಘಟ್ಟದಲ್ಲಿ ಅನೇಕ ಅಪಾಯದ ನಡುವೆಯೂ ಸಹ ನಮ್ಮ ನೀರಿಗಾಗಿ ನಾವು ಹೋರಾಟ ನಡೆಸುತ್ತೇವೆ ಎಂದು ಬೃಹತ್ ಪಾದಯಾತ್ರೆ ಸಂಘಟಿಸಿದ್ದರು. ಈ ವಿಶೇಷ ಪಾದಯಾತ್ರೆಗಾಗಿ ಸಾದು ಕೋಕಿಲ್ ವಿಶೇಷ ಗೀತೆ ಸಹ ರಚಿಸಿ ಸಂಗೀತ ಸಂಯೋಜಿಸಿದ್ದರು. ಈ ಹಾಡಿನ ಉತ್ಸಾಹದೊಂದಿಗೆ ಲಕ್ಷಾಂತರ ಹೆಜ್ಜೆಗಳು ಮೇಕೆದಾಟಿಗಾಗಿ ಹೆಜ್ಜೆ ಹಾಕಿದ್ದವು.
ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆಯು ತಮಿಳುನಾಡಿನ ಹಿತಾಸಕ್ತಿ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಸಮಾನವಾಗಿ ರಕ್ಷಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಂವಾದ ಕರ‍್ಯಕ್ರಮದಲ್ಲಿ ಈ ವಿಷಯವನ್ನು ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್, ಮೇಕೆದಾಟು ಯೋಜನೆಯಿಂದ ಸಂಗ್ರಹವಾಗುವ ನೀರಿನ ಶೇ.೯೫ರಷ್ಟು ಭಾಗವನ್ನು ತಮಿಳುನಾಡಿನ ಬಳಕೆಗೆ ನೀಡಲಾಗುತ್ತದೆ. ಇದು ಆ ರಾಜ್ಯಕ್ಕೆ ಜೀವರಕ್ಷಕವಾಗಲಿದೆ. ಪ್ರವಾಹದ ಸಂರ‍್ಭದಲ್ಲಿ ವ್ರ‍್ಥವಾಗಿ ಸಮುದ್ರಕ್ಕೆ ಹರಿದುಹೋಗುವ ನೀರನ್ನು ಸಂಗ್ರಹಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಈ ಜಲಾಶಯದ ನೀರನ್ನು ರ‍್ನಾಟಕವು ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ನಿಗದಿಪಡಿಸಿರುವ ೪.೭೫ ಟಿಎಂಸಿ ನೀರನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ. ಸಾಮಾನ್ಯ ರ‍್ಷಗಳಲ್ಲಿ ತಮಿಳುನಾಡಿಗೆ ಬಿಡುಗಡೆ ಮಾಡಬೇಕಾದ ೧೭೭.೨೫ ಟಿಎಂಸಿ ಕಾವೇರಿ ನೀರಿನ ಕುರಿತ ಸುಪ್ರೀಂ ಕರ‍್ಟ್ ನರ‍್ದೇಶನವನ್ನು ಸಂಪರ‍್ಣವಾಗಿ ಗೌರವಿಸಿ, ಪಾಲಿಸಲಾಗುವುದು ಎಂದು ಶಿವಕುಮಾರ್ ಪುನರುಚ್ಚರಿಸಿದರು.
ಸಿಎಂ ವಿಜಯ ಜೊತೆ ರ‍್ಚೆ
ಮೇಕೆದಾಟು ವಿಷಯವಾಗಿ ಈ ವಿಷಯವಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಈ ಕುರಿತು ರ‍್ಚಿಸಿರುವುದಾಗಿ ತಿಳಿಸಿದರು.
ಅಂತರರಾಜ್ಯ ಜಲ ವಿವಾದಗಳನ್ನು ಕಾನೂನು ಹೋರಾಟದ ಮೂಲಕ ಬಗೆಹರಿಸುವುದಕ್ಕಿಂತ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಉತ್ತಮ. ತುಂಗಭದ್ರಾ ನದಿ ನೀರಿನ ಹಂಚಿಕೆ ವಿಚಾರವಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಕಾರಾತ್ಮಕ ಮಾತುಕತೆಯ ಮಾದರಿಯನ್ನು ಮೇಕೆದಾಟು ವಿಚಾರದಲ್ಲೂ ಅನುಸರಿಸಬಹುದು ಎಂಬ ನಿಲುವನ್ನು ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
೯ ಸಾವಿರ ಕೋಟಿ ರೂ. ಯೋಜನೆ
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸುಮಾರು ೯,೦೦೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ. ೨೦೧೯ರ ಬೆಲೆ ಆಧಾರದ ಮೇಲೆ ರೂಪಿಸಿರುವ ಈ ಬಹುಪಯೋಗಿ ಯೋಜನೆಯಡಿ ೪.೭೫ ಟಿಎಂಸಿ ಕುಡಿಯುವ ನೀರು ಒದಗಿಸುವುದರ ಜತೆಗೆ ೪೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.
ಯೋಜನೆಯಿಂದ ತಮ್ಮ ನೀರಿನ ಪಾಲಿಗೆ ಧಕ್ಕೆಯಾಗಲಿದೆ ಎಂದು ತಮಿಳುನಾಡು ರ‍್ಕಾರ ನಿರಂತರವಾಗಿ ವಿರೋಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ರ‍್ನಾಟಕ ರ‍್ಕಾರವು ಕಾನೂನು ಹೋರಾಟದ ಜತೆಗೆ ನೆರೆ ರಾಜ್ಯದೊಂದಿಗೆ ಸೌಹರ‍್ದಯುತ ಮಾತುಕತೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.