Loading...

ಕೆರೆಗೆ ನೀರು ರೈತನ ಬದುಕಿಗೆ ಹೊಸ ಚೈತನ್ಯ:ಐತಿಹಾಸಿಕ ಕೆರೆಗೆ ಮರುಜೀವ;ಶಾಸಕ ಜಗದೀಶ್ ಗುಡಗುಂಟಿ ಅವರ ದೂರದೃಷ್ಟಿಯ ಹೆಜ್ಜೆ

Suddi Mitra Editor

July 20, 2026 • 08:14 AM

ಕೆರೆಗೆ ನೀರು ರೈತನ ಬದುಕಿಗೆ ಹೊಸ ಚೈತನ್ಯ:ಐತಿಹಾಸಿಕ ಕೆರೆಗೆ ಮರುಜೀವ;ಶಾಸಕ ಜಗದೀಶ್ ಗುಡಗುಂಟಿ ಅವರ ದೂರದೃಷ್ಟಿಯ ಹೆಜ್ಜೆ

ಅಪ್ಪು ಪೋತರಾಜ

ಜಮಖಂಡಿ: ನೀರು ಎಂದರೆ ಬದುಕು.ಕೆರೆ ಎಂದರೆ ಗ್ರಾಮೀಣ ಬದುಕಿನ ಜೀವನಾಡಿ. ಒಂದು ಕೆರೆ ತುಂಬಿದರೆ ಅದು ಕೇವಲ ಜಲಾಶಯವೊಂದನ್ನು ತುಂಬಿಸುವುದಲ್ಲ; ರೈತನ ಭರವಸೆ, ಗ್ರಾಮೀಣ ಆರ್ಥಿಕತೆ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಕೂಡ ಸಮೃದ್ಧಗೊಳಿಸುತ್ತದೆ. 

ಉತ್ತರ ಕರ್ನಾಟಕವು ಬಹುತೇಕ ಮಳೆ ಆಧಾರಿತ ಪ್ರದೇಶಗಳಾಗಿವೆ ಈ ಸತ್ಯ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ. ಮಳೆ ಚೆನ್ನಾಗಿ ಬಂದರೆ ಸಮೃದ್ಧಿ ಕೈಕೊಟ್ಟರೆ ಸಂಕಷ್ಟ. ಇಂತಹ ಅನಿಶ್ಚಿತತೆಯ ಮಳೆಯ ಕೊರತೆ ಮತ್ತು ಅಂತರ್ಜಲ ಕುಸಿತದಿಂದ ಅನೇಕ ಕೆರೆಗಳು ಜೀವ ಕಳೆದುಕೊಂಡಿವೆ. ಪರಿಣಾಮವಾಗಿ ಕೊಳವೆಬಾವಿಗಳು ಬತ್ತಿವೆ, ಕೃಷಿ ವೆಚ್ಚ ಹೆಚ್ಚಿದೆ ಮತ್ತು ಗ್ರಾಮೀಣ ಬದುಕು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ನಾಡೋಜ ಜಗದೀಶ್ ಗುಡಗುಂಟಿ ಅವರ ನೇತೃತ್ವದಲ್ಲಿ ಸಿದ್ಧಾಪೂರ ಗ್ರಾಮದ ಐತಿಹಾಸಿಕ ಕೆರೆಗೆ ನೀರು ತುಂಬಿಸುವ ಯೋಜನೆ ಗ್ರಾಮೀಣ ಅಭಿವೃದ್ಧಿಯ ಹೊಸ ಮಾದರಿಯಾಗಿ ಹೊರಹೊಮ್ಮಿದೆ.

ಶಾಸಕರಾಗುವ ಮುನ್ನ ಉದ್ಯಮಿಯಾಗಿದ್ದ ಜಗದೀಶ್ ಗುಡಗುಂಟಿ ಅವರು ತಮ್ಮ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಜಾಕ್‌ವೆಲ್‌ನಿಂದ ಸುಮಾರು 22 ಕಿಲೋಮೀಟರ್ ದೂರದವರೆಗೆ ಪೈಪ್‌ಲೈನ್ ಅಳವಡಿಸಿ, ಸುಮಾರು ₹24 ಕೋಟಿ ವೆಚ್ಚದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸಿದ್ದಾರೆ. ದಶಕಗಳಿಂದ ನೀರಿನ ಕೊರತೆಯಿಂದ ಬಳಲುತ್ತಿದ್ದ 79 ಎಕರೆ ವಿಸ್ತೀರ್ಣದ ಸಿದ್ಧಾಪೂರ ಕೆರೆಗೆ ಮತ್ತೆ ಜೀವ ತುಂಬುವ ಈ ಕಾರ್ಯವು ಕೇವಲ ಒಂದು ಕಾಮಗಾರಿ ಅಲ್ಲ; ಇದು ರೈತರ ಬದುಕಿಗೆ ಹೊಸ ಭರವಸೆ ನೀಡಿದ ಜನಪರ ಸಂಕಲ್ಪವಾಗಿದೆ.

ಈ ಯೋಜನೆಯಿಂದ ಸುತ್ತಮುತ್ತಲಿನ ಎಂಟರಿಂದ ಹತ್ತು ಗ್ರಾಮಗಳ ಅಂತರ್ಜಲ ಮಟ್ಟ ಏರಿಕೆಯಾಗುವ ನಿರೀಕ್ಷೆಯಿದೆ. ನೂರಾರು ಕೊಳವೆಬಾವಿಗಳು ಮತ್ತು ಬಾವಿಗಳು ಮರುಜೀವ ಪಡೆಯಲಿವೆ. ಕೃಷಿಗೆ ನೀರು ಲಭ್ಯವಾಗುವುದರ ಜೊತೆಗೆ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯೂ ಬಹುಮಟ್ಟಿಗೆ ಪರಿಹಾರವಾಗಲಿದೆ.

ಇಂದಿನ ರಾಜಕೀಯದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುವವರು ಅನೇಕರಿದ್ದಾರೆ. ಆದರೆ ತಮ್ಮ ಸಂಪನ್ಮೂಲಗಳನ್ನು ಜನರ ಹಿತಕ್ಕಾಗಿ ಬಳಸಿಕೊಂಡು ಶಾಶ್ವತ ಪರಿಹಾರ ಕಲ್ಪಿಸುವವರು ವಿರಳ. ಈ ದೃಷ್ಟಿಯಿಂದ ಶಾಸಕ ನಾಡೋಜ ಜಗದೀಶ್ ಗುಡಗುಂಟಿ ಅವರ ಈ ಯೋಜನೆ ಕೇವಲ ರಾಜಕೀಯ ಸಾಧನೆಯಲ್ಲ; ಗ್ರಾಮೀಣ ಜಲಸಂಪನ್ಮೂಲ ನಿರ್ವಹಣೆಯ ಮಾದರಿಯಾಗಿದೆ.

- Advertisement -