Loading...

ಜನಸೇವೆಯಲ್ಲಿಯೇ `ಆನಂದ' : ಪ್ರಗತಿಯೇ ಪ್ರಧಾನ.... ಹುನಗುಂದದ `ಹೊನ್ನ' ವಿಜಯಾನಂದ....

Suddi Mitra Editor

August 05, 2026 • 09:00 AM

ಜನಸೇವೆಯಲ್ಲಿಯೇ `ಆನಂದ' : ಪ್ರಗತಿಯೇ ಪ್ರಧಾನ....  ಹುನಗುಂದದ `ಹೊನ್ನ' ವಿಜಯಾನಂದ....

ಅಪ್ಪು ಪೋತರಾಜ

ಬೆಂಗಳೂರು : ಆಗಿನ್ನೂ ಇನ್ನೋವಾ, ಫಾರ್ಚ್ಯೂನರ್ ಕಾರುಗಳ ಕಾರುಭಾರು ಇರಲಿಲ್ಲ. ಆಗ ಕೆಂಪುದೀಪದ ಕಾಂಟೆಸ್ಸಾ ಕಾರುಗಳೇ ಮಿನಿಸ್ಟರ್‌ಗಳಿಗೆ ನಿಯೋಜನೆಯಾಗಿದ್ದವು. ಅಂದು ಸಚಿವರಾಗಿದ್ದ ದಿ.ಎಸ್.ಆರ್. ಕಾಶಪ್ಪನವರು ತಮ್ಮ ಈ ಸರ್ಕಾರಿ ವಾಹನದಲ್ಲಿ ಸಂಚರಿಸುವಾಗ ಜನಸಾಮಾನ್ಯರಿಗೂ *ಲಿಫ್ಟ್ ಕೊಡುವ ಮಿನಿಸ್ಟರ್* ಆಗಿದ್ದರು. ಸರ್ ಇದು ಶಿಷ್ಟಾಚಾರದಲ್ಲಿ ಬರಲ್ಲ ಎಂದರೆ, ಜನರೇ ಪ್ರಭುಗಳು, ಅವರು ಈ ವಾಹನದಲ್ಲಿ ಸಂಚರಿಸುವ ಸಂಪೂರ್ಣ ಅಧಿಕಾರವಿದೆ ಎಂದು ಹೇಳುವ ಮೂಲಕ ಜನಸಾಮಾನ್ಯರನ್ನೇ ಆರಾಧ್ಯ ದೈವವಾಗಿಸಿಕೊಂಡಿದ್ದ ದಿ.ಎಸ್.ಆರ್. ಕಾಶಪ್ಪನವರ.

ಅವರ ಪಡಿಯಚ್ಚಿನಂತೆ ಇರುವ ಅವರ ಪುತ್ರ ವಿಜಯಾನಂದ ಕಾಶಪ್ಪನವರ ಈಗ ಡಿ.ಕೆ. ಶಿವಕುಮಾರ್ ಮಂತ್ರಿ ಮಂಡಳದಲ್ಲಿ ಸಚಿವ ಸ್ಥಾನದ ನಗೆ ಬೀರಿದ್ದಾರೆ.

ವಿಜಯಾನಂದ ಕಾಶಪ್ಪನವರ ಅವರ ಹೆಸರು ಕೇಳಿಬಂದಾಗ ಸದಾ ಸುದ್ದಿಯಾಗುವುದೇ ಅವರ ಸಿಟ್ಟು. ಸ್ವಭಾವ ಮುಂಗೋಪವಾದರೂ ಸದಾ ಜನ ಕಳಕಳಿಯ ಮನೋಭಾವ.

ಹುನಗುಂದ ಶಾಸಕರಾಗಿರುವ ವಿಜಯಾನಂದ ಕಾಶಪ್ಪನವರ ಜನರ ಬಗ್ಗೆ ತಂದೆಯಂತೆಯೇ ಅಪಾರ ಕಳಕಳಿ ಹೊಂದಿದ ಜನನಾಯಕ. ಯಾರ ಮೇಲೆಯೂ ದ್ವೇಷ ಸಾಧಿಸುವುದಿಲ್ಲ, ಸಿಟ್ಟು ಮಾಡಿಕೊಂಡರೂ ಸಹ ಅದು ಕ್ಷಣಿಕ, ನಂತರ ಅದನ್ನು ಬೆಳೆಸಿ ವೈರತ್ವದ ಮೆಟ್ಟಿಲು ತುಳಿದ ಉದಾಹರಣೆಯೇ ಇಲ್ಲ.

ನನ್ನ ಸ್ವಭಾವ ಸಿಟ್ಟು, ಆದರೆ ನನ್ನ ಹೃದಯದಲ್ಲಿ ಯಾವತ್ತೂ ಅದು ಇರುವುದಿಲ್ಲ, ನಾನು ಎಲ್ಲರನ್ನೂ ಅಣ್ಣ, ತಮ್ಮ ಎಂದೇ ಭಾವಿಸುತ್ತೇನೆ, ಈ ಸಿಟ್ಟು ಸ್ವಂತಿಕೆಯಿಂದ ಬರುತ್ತದೆ ಹೊರತು ದ್ವೇಷದಿಂದ ಅಲ್ಲವೇ ಅಲ್ಲ ಎಂದು ವಿಜಯಾನಂದ ಅನೇಕ ಬಾರಿ ಹೇಳಿದ್ದುಂಟು.


ಸಮಾಜ ಸೇವೆ - ರಾಜಕೀಯ ದೋಣಿಯ ಪಯಣ

ದಿ.ಎಸ್.ಆರ್. ಕಾಶಪ್ಪನವರ ಅವರ ಸಮಾಜ ಸೇವೆ, ಜನಪರ ಕಾಳಜಿಯನ್ನು ಬಾಲ್ಯದಿಂದಲೇ ನೋಡಿಕೊಂಡು ಬೆಳೆದಿರುವ ವಿಜಯಾನಂದರಿಗೆ ಸಮಾಜ ಸೇವೆ ರಕ್ತದ ಕಣಕಣದಲ್ಲಿ ಹರಿಯುತ್ತಿದೆ. ಒಂದರ್ಥದಲ್ಲಿ ಮತಕ್ಷೇತ್ರದ ಜನತೆಯನ್ನು ಕುಟುಂಬ ಸದಸ್ಯರಂತೆ ಕಾಣುವ ಕುಟುಂಬ. ಒಬ್ಬ ಸಹೋದರರ ಮೇಲೆ ಹೊಂದಿರುವಷ್ಟು ಕಕ್ಕುಲತೆ, ಆತ್ಮೀಯತೆಯನ್ನು ಮತಕ್ಷೇತ್ರದ ಜನತೆಯ ಮೇಲೆ ಇರಿಸಿದ ಕಾಶಪ್ಪನವರ ಕುಟುಂಬದ ಕುಡಿಯಾಗಿರುವ ವಿಜಯಾನಂದರಿಗೆ ಜನ ಸೇವೆಯಲ್ಲಿಯೇ ಆನಂದ ಕಾಣುವ ಸ್ವಭಾವ ಬಾಲ್ಯದಿಂದಲೇ ಬೆಳೆದು ಬಂದಿದೆ.

ಅಪ್ಪಟ ರೈತ ಕುಟುಂಬದಿಂದ ಬಂದಿದ್ದ ದಿ.ಎಸ್.ಆರ್. ಕಾಶಪ್ಪನವರ ಜನಸೇವೆಯನ್ನೇ ಉಸಿರಾಗಿಸಿಕೊಂಡು ಉನ್ನತ ಹಂತಕ್ಕೆ ತಲುಪಿದವರು. ಹ್ಯಾಟ್ರೀಕ್ ಗೆಲುವು ಸಾದಿಸಿದ್ದ ದಿ.ಎಸ್.ಆರ್. ಕಾಶಪ್ಪನವರ ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಸಚಿವರಾಗಿದ್ದವರು. ಆಕಸ್ಮಿಕ ಅಪಘಾತದಲ್ಲಿ ಅವರು ಅಸುನೀಗಿದಾಗ ಇಡೀ ಕ್ಷೇತ್ರದ ಜನತೆಯೇ ಕಂಬನಿ ಮಿಡಿದಿದ್ದರು. ನಂತರ ಗೌರಮ್ಮ ಕಾಶಪ್ಪನವರ ಅವರು ಉಪಚುನಾವಣೆಯಲ್ಲಿ ಆಯ್ಕೆಯಾದರು. ಒಟ್ಟು ಆರು ಬಾರಿ ಕಾಶಪ್ಪನವರ ಕುಟುಂಬಕ್ಕೆ ಜನಪ್ರತಿನಿಧಿಯಾಗುವ ಅವಕಾಶವನ್ನು ಹುನಗುಂದ ಜನತೆ ಒದಗಿಸಿರುವುದೇ ಕಾಶಪ್ಪನವರ ಕುಟುಂಬದ ಜನಕಾಳಜಿಗೊಂದು ದಿವ್ಯ ನಿದರ್ಶನ.

ಹೀಗಾಗಿ ಬಾಲ್ಯದಿಂದಲೂ ಈ ಜನಸೇವೆಯ ಒಡನಾಟ ನೋಡುತ್ತಾ ಬೆಳೆದ ವಿಜಯಾನಂದರಿಗೂ ಸಹ ಜನಸೇವೆಯಲ್ಲಿಯೇ ಆನಂದ ಕಾಣುವ ಸ್ವಭಾವ.

2008 ರಲ್ಲಿ ಪ್ರಥಮ ಬಾರಿಗೆ ಶಾಸನ ಸಭೆ ಪ್ರವೇಶಿಸುವ ಕನಸಿನೊಂದಿಗೆ ಹುನಗುಂದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ. ಆದರೆ ಪ್ರಥಮ ಬಾರಿಗೆ ಸೋಲು ಒಲಿಯುತ್ತದೆ, ಜನಸೇವೆಗೆ ಅಧಿಕಾರವೇ ಬೇಕಿಲ್ಲ ಎಂದು ಒಂದ ಕ್ಷಣ ಬಿಡದೇ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ, ಜನರ ಸಂಕಷ್ಟಗಳಿಗೆ ಆ ಕ್ಷೇತ್ರದಲ್ಲಿ ವಕಾಲತ್ತು ವಹಿಸುತ್ತಾರೆ, ಹೀಗಾಗಿ ಮುಂಬರುವ 2013 ರ ಚುನಾವಣೆಯಲ್ಲಿ ಜನರು ವಿಜಯಾನಂದರಿಗೆ `ವಿಜಯ'ದ ಉಡುಗೊರೆ ನೀಡುತ್ತಾರೆ, 2018 ರಲ್ಲಿ ಸೋಲು ಅನುಭವಿಸಿದರೂ ಸಹ ಜನಸೇವೆಯ ಮೂಲಕ 2023 ರಲ್ಲಿ ಜನರ ಮನಗೆಲ್ಲುವಲ್ಲಿ ಮತ್ತೊಮ್ಮೆ ಯಶಸ್ವಿಯಾಗುತ್ತಾರೆ, ಈಗ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಹೊಸ ಉತ್ಸಾಹದೊಂದಿಗೆ ಜನಸೇವೆಯತ್ತ ವಿಜಯಾನಂದ ದಾಪುಗಾಲು ಇರಿಸಿದ್ದಾರೆ.

ಈ ಹಿಂದೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಕರ್ಣಧಾರತ್ವ ಸಹ ವಹಿಸಿದ್ದರು.

ನಿಷ್ಠುರ : ಯಾರಿಗೂ ಹೆದರದ ವೀರ

ನೇರ-ನಿಷ್ಠುರ, ಖಡಕ್ ಸ್ವಭಾವದ ಮೂಲಕ

ವಿಜಯಾನಂದ ಹೆಸರುವಾಸಿ.

ಇಟ್ಟ ಹೆಜ್ಜೆ ಹಿಂದೆ ಇರಿಸುವುದಿಲ್ಲ, ತನ್ನ ಹೇಳಿಕೆಯ ಬಗ್ಗೆ ಸದಾ ಬದ್ಧತೆ, ಜನ ಸೇವೆಗಾಗಿ ಎಂತಹ ಕಷ್ಟಗಳಿಗೂ ಧೈರ್ಯದಿಂದ ಎದುರಿಸುವ ಮನೋಭಾವದ ವಿಜಯಾನಂದ ಅವರು 

ಸಿಟ್ಟು ಬಿಟ್ಟರೆ ಅಪ್ಪಟ ಚಿನ್ನ ಎಂದು ಕಾರ್ಯಕರ್ತರು ಅಭಿಮಾನದಿಂದ ಹೇಳುತ್ತಾರೆ.

ಅವರ ಮೇಲೆ ರಾಜಕೀಯ ಪ್ರೇರಿತ ಪಿತೂರಿಯಿಂದಾಗಿ ಆಪಾದನೆ ಬಂದರೂ ಸಹ ಅದನ್ನು ಸವಾಲಾಗಿ ಸ್ವೀಕರಿಸುವ ನೇತಾರ ಎಂದರೂ ತಪ್ಪಾಗದು.

ಸ್ತ್ರೀ ಸಬಲೀಕರಣ, ಸ್ತ್ರೀಯರಿಗೂ ಸಹ ಅಧಿಕಾರ ದೊರಕಬೇಕು, ಸ್ತ್ರೀಗೆ ಸ್ವಾತಂತ್ರ್ಯ ಇರಬೇಕು ಎಂಬ ಚಿಂತನೆ ಹೊಂದಿರುವ ಅವರು ಸ್ವತ: ತಮ್ಮ ಪತ್ನಿ ವೀಣಾ ಕಾಶಪ್ಪನವರ ಅವರ ರಾಜಕೀಯ ಮುನ್ನಡೆಗಾಗಿ ಶ್ರಮಿಸುತ್ತಿದ್ದಾರೆ, ವೀಣಾ ಕಾಶಪ್ಪನವರ ಅವರು ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿದ್ದರು, ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. 


ನಾನು ರಾಜಕಾರಣದಲ್ಲಿ ಇರಲು ಜನರೇ ಕಾರಣ
ಜನಸೇವೆ ಎಂಬುದು ನನ್ನ ತಂದೆ ದಿ.ಎಸ್.ಆರ್. ಕಾಶಪ್ಪನವರ ಅವರ ಉಸಿರಾಗಿತ್ತು, ಅವರು ಕಂಡ ಕನಸುಗಳನ್ನು ನನಸಾಗಿಸಲು ಅವಿರತವಾಗಿ ಪ್ರಯತ್ನಿಸುತ್ತಿರುವೆ. ಜನರ ಸೇವೆ ಮಾಡಲು 24×7 ಸಿದ್ದ, ಜನರೇ ನನಗೆ ದೇವರು

. ವಿಜಯಾನಂದ ಕಾಶಪ್ಪನವರ, ನೂತನ ಸಚಿವರು

- Advertisement -