ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದ ಹೆಸರಿನಲ್ಲಿ ವಂಚನೆ ಪ್ರಮುಖ ಕಿಂಗಪಿನ್‌ಗೆ `ಕೈ' ರಕ್ಷೆಯೇ? ಕೋಟಿ ಕೋಟಿ ಹಗರಣಕ್ಕೆ ತನಿಖೆ ಎಸ್‌ಐಟಿಗೆ?
ಅಪ್ಪು ಪೋತರಾಜ
ಬಾಗಲಕೋಟೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿರುವ ನೀತಿ ಆಯೋಗದ ಹೆಸರಿನಲ್ಲಿ ಮುಗ್ಧ ರೈತರನ್ನು ವಂಚಿಸಿ ಕೋಟಿ ಕೋಟಿ ರೂ. ಲೂಟಿ ಮಾಡಿದ ಪ್ರಕರಣ ಎಸ್‌ಐಟಿಗೆ ಹಸ್ತಾಂತವಾಗುವುದೇ ಅಥವಾ ಪ್ರಮುಖ ಆರೋಪಿಗೆ `ಕೈ' ನಾಯಕರ ಕೃಪಾ ಕಟಾಕ್ಷ ಇರುವುದರಿಂದ ಸ್ಥಳೀಯ ತನಿಖೆಯಿಂದಲೇ ಕೈ ತೊಳೆದುಕೊಳ್ಳುವುದು ನಡೆಯುವುದೇ ಎಂಬುದು ಹಣ ಕಳೆದುಕೊಂಡವರಲ್ಲಿ ಆತಂಕ ಮೂಡಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಶುದ್ಧ ಆಡಳಿತಕ್ಕೆ ಹೆಸರುವಾಸಿ. ಹಗರಣದ ಸೋಂಕಿಲ್ಲದೇ ಆಡಳಿತ ನಡೆಸುವಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ, ಅವರದ್ದೇ ಅಧ್ಯಕ್ಷತೆಯಲ್ಲಿರುವ ನೀತಿ ಆಯೋಗದ ಹೆಸರಿನಲ್ಲಿ ರಾಜಾರೋಷವಾಗಿ ವ್ಯಕ್ತಿಯೊಬ್ಬ ಫೇಕ್ ಐಡೆಂಡಿಟಿ ಕ್ರೀಯೇಟ್ ಮಾಡಿ ಸಬ್ಸಿಡಿ ಕೊಡುವುದಾಗಿ ಹೇಳಿ ಕೋಟ್ಯಂತರ ರೂ. ಹಣ ಗುಳುಂ ಮಾಡಿರುವ ಪ್ರಕರಣ ಎಸ್‌ಐಟಿ ಮೆಟ್ಟಿಲೇರಬೇಕು ಎಂಬುದು ಅನೇಕರ ವಾದ.
ಇದು ಮುಗ್ಧ ರೈತರನ್ನು ವಂಚಿಸಿದ ವಿಷಯ, ಇನ್ನೊಂದೆಡೆ ನೀತಿ ಆಯೋಗದ ಹೆಸರಿನ ದುರ್ಬಳಕೆ, ದೇಶದ ಪ್ರಧಾನಮಂತ್ರಿಗಳ ಹೆಸರಿಗೆ ಮಸಿ ಬಳಿಯುವ ಪ್ರಯತ್ನವೂ ಹೌದು, ಆಯೋಗದ ಹೆಸರಿನಲ್ಲಿ ಫೇಕ್ ಐಡೆಂಟಿಟಿ ಕ್ರಿಯೇಟ್ ಮಾಡುವುದು ಒಂದು ದೊಡ್ಡ ವಂಚನೆಯೇ ಸಹ, ಹೀಗಾಗಿ ಈ ಪ್ರಕರಣದ ಕಿಂಗ್ ಪಿನ್ ಎನ್ನಲಾಗಿರುವ ರಾಜು ಗಸ್ತಿ ವಿರುದ್ಧ ತನಿಖೆ ನಡೆಸಲು ಎಸ್‌ಐಟಿ ರಚನೆಗೆ ಒತ್ತಾಯ ಮೊಳಗುತ್ತಿದೆ.
ಆದರೆ ರಾಜು ಗಸ್ತಿ ಬಹುತೇಕ ಕಾಂಗ್ರೆಸ್ ನಾಯಕರೊಂದಿಗೆ ಒಡನಾಟ ಹೊಂದಿದ್ದಾನೆ ಎನ್ನಲಾಗಿದೆ. ಬಹುತೇಕ ಕಾಂಗ್ರೆಸ್‌ನ ಮುಂಚೂಣಿ ನಾಯಕರೊಂದಿಗೆ ಬಾಂಧವ್ಯ ಕಾಯ್ದುಕೊಂಡಿರುವ ಪರಿಣಾಮ ರಾಜು ಗಸ್ತಿಗೆ ಈ ಪ್ರಭಾವಳಿ ಶ್ರೀರಕ್ಷೆಯಾಗಿರುವುದರಲ್ಲಿ ಎರಡು ಮಾತಿಲ್ಲ. ಅವರೇ ಗಸ್ತಿ ರಕ್ಷಣೆಗೆ ನಿಂತಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ರಾಜು ಗಸ್ತಿ ಮಾತ್ರವಲ್ಲದೆ, ಈ ವಂಚನೆಗೆ ಸಹಕರಿಸಿದ ಎಲ್ಲ ಸಹಚರರ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ಪ್ರಕರಣ ದಾಖಲಿಸಬೇಕು ಎಂದು ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ. ಪ್ರಕರಣದ ವ್ಯಾಪ್ತಿ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಲೇಬೇಕು ಎಂಬ ವಾದ
ವಂಚಕನೋ : ಚಿಂತಕನೋ?
ಈ ಪ್ರಕರಣದ ಕಿಂಗ್ ಪಿನ್ ಆಗಿರುವ ರಾಜು ಗಸ್ತಿ ಮೇಲ್ನೋಟಕ್ಕೆ ಚಿಂತಕನಂತೆ ಫೋಸ್ ಹೊಂದಿರುವ ವ್ಯಕ್ತಿ, ಸಮಾಜ ಸೇವೆ ಮೊದಲಾದ ವಿಷಯಗಳಿಗೆ ರಾಜು ಗಸ್ತಿ ಗೌರವ ಡಾಕ್ಟರೇಟ್ ಪಡೆದಿದ್ದಾನೆ. ಅದು ಸಹ ಫೇಕ್ ಇದೆಯೋ ಅಥವಾ ಯಾವ ರೀತಿ ಡಾಕ್ಟರೇಟ್ ಪಡೆದಿದ್ದಾನೆ, ಆತನ ಸಾಮಾಜಿಕ ಸೇವಾ ಹಿನ್ನೆಲೆ, ಆತ ಕೊಟ್ಟಿರುವ ನೈಜ ಕೊಡುಗೆಗಳ ಬಗ್ಗೆಯೂ ಪರಾಮರ್ಶನವಾಗಬೇಕಿದೆ. ಯಾವ ಮಾನದಂಡ ಆಧರಿಸಿ ಆತನಿಗೆ ಪ್ರಶಸ್ತಿಗಳು ನೀಡಲಾಗಿದೆ, ಆತ ವಂಚಕನೆಂದೋ ಅಥವಾ ಚಿಂತಕನೆಂದೋ ಎಂಬುದು ಗೊತ್ತಾಗದ ಪರಿಸ್ಥಿತಿ ಇದೆ.
ಹೀಗಾಗಿ ಆತನಿಗೆ ಈ ಎಲ್ಲ ಪ್ರಶಸ್ತಿ ನೀಡಿರುವ ಸಂಸ್ಥೆಗಳು ಸಹ ಸ್ಪಷ್ಟೀಕರಣ ನೀಡುವ ಕೂಗು ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ಈ ಬೆಳಕಿನಲ್ಲಿಯೂ ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.