Loading...

ರಾಷ್ಟ್ರಧ್ವಜವೇ ವಾಲಿದೆ… ದೇಶಭಕ್ತಿಯ ಮಾತುಗಳನ್ನಾಡುವ ನಾಯಕರ ಕಣ್ಣಿಗೆ ಇದು ಕಾಣುತ್ತಿಲ್ಲವೇ?

Suddi Mitra Editor

August 25, 2026 • 07:06 AM

ರಾಷ್ಟ್ರಧ್ವಜವೇ ವಾಲಿದೆ… ದೇಶಭಕ್ತಿಯ ಮಾತುಗಳನ್ನಾಡುವ ನಾಯಕರ ಕಣ್ಣಿಗೆ ಇದು ಕಾಣುತ್ತಿಲ್ಲವೇ?
Image Credit / Source: 16:9

ತಿರಂಗಾ ಧ್ವಜ ಪ್ರತಿಯೊಬ್ಬ ಭಾರತೀಯರ ದೇಶಾಭಿಮಾನದ ದಿವ್ಯ ಸ್ವರೂಪ.
ಭಾರತೀಯರು ತಮ್ಮ ಜೀವಕ್ಕಿಂತ ಅಧಿಕ ತ್ರಿವರ್ಣ ಧ್ವಜವನ್ನು ಗೌರವಿಸುತ್ತಾರೆ‌.
ಆದರೆ ಶಾಸನ ಸಭೆಗಳನ್ನು ನಡೆಸುವ ಪವಿತ್ರ ಅಧಿಕಾರವನ್ನು ಪ್ರಜಾಪ್ರಭುಗಳಿಂದ ಪಡೆದಿರುವ ಶಾಸಕರ ವಾಸ್ತವ್ಯ ಮಾಡುವ ಶಾಸಕರ ಭವನದ ಅಂಗಳದಲ್ಲಿಯೇ ರಾಷ್ಟ್ರ ಧ್ವಜಕ್ಕೆ ಅಪಮಾನವಾಗುತ್ತಿದೆ.
ದೇಶಭಕ್ತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ದೊಡ್ಡ ದೊಡ್ಡ ನಾಯಕರು ನಿತ್ಯ ಇಲ್ಲಿಯೇ ಸಂಚರಿಸುತ್ತಿದ್ದರೂ ರಾಷ್ಟ್ರ ಧ್ವಜಕ್ಕೆ ಆಗುತ್ತಿರುವ ಅಪಮಾನ ಅವರ ಕಣ್ಣಿಗೆ ಕಾಣುತ್ತಿಲ್ಲವೇ?
ಸ್ವಾತಂತ್ರೋತ್ಸವ ದಿನಾಚರಣೆ ಸಂಭ್ರಮಕ್ಕಾಗಿ ತ್ರಿವರ್ಣ ಧ್ವಜದ ತಳಿರು ತೋರಣವನ್ನು ಶಾಸಕರ ಭವನದ ಮುಖ್ಯ ದ್ವಾರದಲ್ಲಿ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ತ್ರಿವರ್ಣ ಧ್ಜಜದ ತಳಿರು ತೋರಣ ಹಾಕಲಾಗಿದ್ದು, ಅದರ ಮೇಲೆ ತ್ರಿವರ್ಣ ಧ್ವಜ ಅಳವಡಿಸಲಾಗಿದೆ‌.
ಈ ತಳಿರು ತೋರಣ ಸಂಪೂರ್ಣ ಅವಸಾನದ ಸ್ವರೂಪ ತಲುಪಿದೆ, ಅಳವಡಿಸಲಾಗಿರುವ ಕಂಬವೂ ಸಂಪೂರ್ಣ ವಾಲಿದೆ.
ಭಾರತೀಯ ಧ್ವಜ ಸಂಹಿತೆ 2002ರ ಪ್ರಕಾರ ಧ್ವಜ ಕಂಬದ
ನೇರವಾಗಿ, ಗಟ್ಟಿಯಾಗಿ, ಲಂಬವಾಗಿ ನೆಟ್ಟಿರಬೇಕು ಹಾಗೂ ತುಕ್ಕು ಹಿಡಿದ, ಬಾಗಿದ, ಮುರಿದ ಕಂಬದಲ್ಲಿ ಧ್ವಜ ಹಾರಿಸಬಾರದು. ಅದು ಧ್ವಜಕ್ಕೆ ಮಾಡಿದ ಅಗೌರವ ಆಗುತ್ತದೆ ಎಂದು ಉಲ್ಲೇಖಿಸಿದೆ.
ನೆಲದಲ್ಲಿ ನೆಟ್ಟಿರುವ ದೊಡ್ಡ ಕಂಬ (Ground Pole) ವಾಲಿದರೆ - ನಡೆಯುವುದಿಲ್ಲ,
ಅದು ಬಿದ್ದು ಹೋಗುವ ಸ್ಥಿತಿಯಲ್ಲಿದ್ದರೆ, ವಾಲಿದ್ದರೆ ತಕ್ಷಣ ಸರಿಪಡಿಸಬೇಕು ಅಥವಾ ಬದಲಾಯಿಸಬೇಕು. ವಾಲಿದ ಕಂಬದಲ್ಲಿ ಧ್ವಜ ಹಾರಿಸುವುದು ಧ್ವಜ ಸಂಹಿತೆ ಉಲ್ಲಂಘನೆಯೂ ಹೌದು.
ಆದರೆ ಶಾಸನ ಮಾಡುವವರು ವಾಸಿಸುವ ಈ ಸ್ಥಳದಲ್ಲಿ ಈ ರೀತಿ ಧ್ವಜಕ್ಕೆ ಅಪಮಾನವಾಗಿರುವುದು ದೇಶಭಕ್ತರಲ್ಲಿ ಕೆರಳಿಸಿದೆ.

- Advertisement -