Loading...

ಬಿಡದಿ ರೈತರಿಗೆ ₹3 ಕೋಟಿ, ಉತ್ತರ ಕರ್ನಾಟಕ ರೈತರಿಗೆ ₹40 ಲಕ್ಷವೂ ಇಲ್ಲ: ಯತ್ನಾಳ ಆಕ್ರೋಶ

Suddi Mitra Editor

August 19, 2026 • 12:44 PM

ಬಿಡದಿ ರೈತರಿಗೆ ₹3 ಕೋಟಿ, ಉತ್ತರ ಕರ್ನಾಟಕ ರೈತರಿಗೆ ₹40 ಲಕ್ಷವೂ ಇಲ್ಲ: ಯತ್ನಾಳ ಆಕ್ರೋಶ

ಬಿಡದಿ ಯೋಜನೆ ಕೈಬಿಡಿ; ನಾಗೇಂದ್ರ ರಾಜೀನಾಮೆ ನೀಡಲಿ: ಯತ್ನಾಳ

ಬೆಂಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ನಿಜವಾಗಿಯೂ ದಲಿತ ಪರ ಸಿದ್ಧಾಂತವಿದ್ದರೆ ಮಾಜಿ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಉದ್ಧಾರಕ್ಕಾಗಿ ಹೋರಾಟ ಮಾಡುವ ಬದಲು ಕಾಂಗ್ರೆಸ್‌ ಪಕ್ಷದ ಉದ್ಧಾರಕ್ಕಾಗಿ ನಾಗೇಂದ್ರ ಅವರು ಹಗರಣ ಮಾಡಿದ್ದಾರೆ. ಹಗರಣದ ಆರೋಪ ಎದುರಿಸುತ್ತಿರುವ ಅವರು ರಾಜೀನಾಮೆ ನೀಡಿ ಸದನದ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಬಿಡದಿ ಯೋಜನೆಗೆ ವಿರೋಧ

ಬಿಡದಿ ಯೋಜನೆಯನ್ನು ಕೈಬಿಡಬೇಕು. ಸ್ಥಳೀಯ ರೈತರ ವಿರೋಧದ ನಡುವೆಯೂ ಯೋಜನೆ ಕೈಗೆತ್ತಿಕೊಂಡಿರುವುದು ಸರಿಯಾದ ಕ್ರಮವಲ್ಲ. ಬಿಡದಿ ರೈತರಿಗೆ ಪರಿಹಾರವಾಗಿ ₹3 ಕೋಟಿ ನೀಡಲು ಸರ್ಕಾರ ಮುಂದಾಗಿರುವುದಾಗಿ ಹೇಳಲಾಗುತ್ತಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಯೋಜನೆಯ ಸಂತ್ರಸ್ತ ರೈತರಿಗೆ ₹40 ಲಕ್ಷ ಪರಿಹಾರ ನೀಡಲು ಸರ್ಕಾರ ಸಿದ್ಧವಿಲ್ಲ. ಒಂದು ಕಡೆ ₹3 ಕೋಟಿ ನೀಡುವ ಸರ್ಕಾರ ಮತ್ತೊಂದು ಕಡೆ ₹40 ಲಕ್ಷ ನೀಡಲು ಹಿಂದೇಟು ಹಾಕುತ್ತಿರುವುದು ಮಲತಾಯಿ ಧೋರಣೆಯಾಗಿದೆ ಎಂದು ಯತ್ನಾಳ ಆರೋಪಿಸಿದರು.

ಉತ್ತರ ಕರ್ನಾಟಕದ ರೈತರಿಗೂ ಸಮಾನ ನ್ಯಾಯ ನೀಡಬೇಕು. ಕೃಷ್ಣಾ ಯೋಜನೆಯ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

SIRಗೆ ಇನ್ನೊಂದು ತಿಂಗಳ ಅವಕಾಶ

ಎಸ್‌ಐಆರ್‌ ಪ್ರಕ್ರಿಯೆಗೆ ಇನ್ನೊಂದು ತಿಂಗಳ ಕಾಲಾವಕಾಶ ನೀಡಬೇಕು. ಕೆಲವು ಕಡೆ ಬಿಎಲ್‌ಒಗಳು ಸಮರ್ಪಕವಾಗಿ ಕೆಲಸ ಮಾಡಿಲ್ಲ. ಹೀಗಾಗಿ ಅರ್ಹ ಮತದಾರರ ಹೆಸರು ಸೇರ್ಪಡೆ ಹಾಗೂ ತಪ್ಪುಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲು ಕಾಲಾವಕಾಶ ವಿಸ್ತರಿಸುವ ಅಗತ್ಯವಿದೆ ಎಂದು ಯತ್ನಾಳ ಹೇಳಿದರು.

- Advertisement -