Loading...

ಸಚಿವ ಸ್ಥಾನಕ್ಕೆ ಜಮೀರ್ ಬೆಂಬಲಿಗರ ಮನವಿ! ಜಮೀರ್ ಹೆಸರೇಳ್ತಿದ್ದಂತೆ ಸಿಟ್ಟಾದ ಸಿದ್ದರಾಮಯ್ಯ! ಡಿಕೆಶಿ ಸಂಪುಟದಲ್ಲಿ ಸ್ಥಾನ ಸಿಗುವುದು ಕಷ್ಟಕರ.

Suddi Mitra Editor

June 11, 2026 • 11:14 AM

ಸಚಿವ ಸ್ಥಾನಕ್ಕೆ ಜಮೀರ್ ಬೆಂಬಲಿಗರ ಮನವಿ! ಜಮೀರ್ ಹೆಸರೇಳ್ತಿದ್ದಂತೆ  ಸಿಟ್ಟಾದ ಸಿದ್ದರಾಮಯ್ಯ! ಡಿಕೆಶಿ ಸಂಪುಟದಲ್ಲಿ ಸ್ಥಾನ  ಸಿಗುವುದು ಕಷ್ಟಕರ.

ಬೆಂಗಳೂರು:ಸಿದ್ದರಾಮಯ್ಯ ಅವರ ‘ಪರಮಾಪ್ತ’ ಎಂದೇ ಜಮೀರ್ ಗುರುತಿಸಿಕೊಂಡಿದ್ದ ಜಮೀರ್

ಅಹ್ಮದ್ ಖಾನ್‌ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ಮುಸ್ಲಿಂ ಓಟ್‌ ಬ್ಯಾಂಕ್‌ನ ಮಾಸ್‌ ಲೀಡರ್‌‌. ಸಿದ್ದರಾಮಯ್ಯ ಸರ್ಕಾರದಲ್ಲಿ ಜಮೀರ್‌‌‌ ಗತ್ತು ಬೇರೆ ಲೆವೆಲ್‌ಗೆ ಇತ್ತು.

ಸಿದ್ದರಾಮಯ್ಯನವರ ಜೊತೆ ಸದಾ ನೆರಳಿನಂತೆ ಇರುತ್ತಿದ್ದ ಜಮೀರ್ ವಿರುದ್ಧವೇ ಸಿದ್ದರಾಮಯ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ. ಜಮೀರ್ ಹೆಸರೇಳ್ತಿದ್ದಂತೆ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಜಮೀರ್ ಬೆಂಬಲಿಗರ ಮಾತಾಡಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರರಲ್ಲ ಎಂಬ ಮಾತಿದೆ. ಇದೀಗ ಈ ಮಾತು ಸತ್ಯ ಎಂಬಂತೆ ಕಾಣ್ತಿದೆ. ತನ್ನ ಗುರುವಿನ ವಿರೋಧ ಷಡ್ಯಂತ್ರ ಮಾಡಿದರಾ ಜಮೀರ್ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಮಾಜಿ ಸಚಿವ ಜಮೀರ್ ಅವರು ಖುದ್ದು ಸಿದ್ದರಾಮಯ್ಯ ಕೆಂಗಣ್ಣಿಗೆ ಗುರಿಯಾಗಿದ್ದು. ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದೆ. ಈ ಹಿನ್ನೆಲೆ ಜಮೀರ್ ಬೆಂಬಲಿಗರು ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಜಮೀರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಹೀಗೆ ಜಮೀರ್ ಬೆಂಬಲಿಗರು ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ. ಈ ವೇಳೆ ಜಮೀರ್ ಆಪ್ತರ ಮನವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಜಮೀರ್ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರ ಬಳಿ ಬಂದು ಜಮೀರ್ ಹೆಸರು ಹೇಳಿದ್ದಾರೆ. ಆದ್ರೆ, ಜಮೀರ್ ಹೆಸರೇಳ್ತಿದ್ದಂತೆ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ‘ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಜಮೀರ್ ಬೆಂಬಲಿಗರ ಮಾತಾಡಿರುವ ವೀಡಿಯೋ ವೈರಲ್ ಆಗಿದ್ದು, ಸಿದ್ದರಾಮಯ್ಯ ಅವರ ಜೊತೆ ಸದಾ ನೆರಳಿನಂತೆ ಇರುತ್ತಿದ್ದ ಜಮೀರ್ ಅವರ ವಿರುದ್ಧವೇ ಕೆಲಸ ಮಾಡಿದ್ರಾ? ಆಪ್ತನ ವಿರುದ್ಧ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದು ಯಾಕೆ ಅನ್ನೋ ಚರ್ಚೆ ಇದೀಗ ಜೋರಾಗಿದೆ.

ಇನ್ನೊಂದೆಡೆ ಜಮೀರ್ ಅಹಮದ್ ಖಾನ್ ಅವರ ಬೆಂಬಲಿಗರ ಮೇಲೆ ಶಾಸಕ ಶಿವಲಿಂಗೇಗೌಡ ಗರಂ ಆಗಿರುವ ಘಟನೆ ನಡೆದಿದೆ. ಜಮೀರ್ ಬೆಂಬಲಿಗರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಭೇಟಿಗೆ ಬಂದಿದ್ದರು. ಈ ವೇಳೆ ಹೊರಗೆ ನಿಂತಿದ್ದ ಜಮೀರ್ ಬೆಂಬಲಿಗರ ಮೇಲೆ ಶಿವಲಿಂಗೇಗೌಡ ಗರಂ ಆಗಿದ್ದಾರೆ. ನೀವು ಹೀಗೆ ಹೀಗೆ ಹೇಳ್ತಾನೇ ಅವರಿಗೆ ಸಮಸ್ಯೆ ಮಾಡ್ತಿದ್ದೀರಾ ಎಂದು ಸಿಟ್ಟಾಗಿದ್ದಾರೆ.

- Advertisement -